HMPV ವೈರಸ್: ಬೆಂಗಳೂರು, ಭಾರತದ ಮೊದಲ ಪ್ರಕರಣವಲ್ಲ
HMPV ಹೊಸ ವೈರಸ್ ಅಲ್ಲ, ಮಗುವಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಮಗು ಹಾಗೂ ಪೋಷಕರು ಸ್ಥಳೀಯರಾಗಿದ್ದು ಅವರು ಎಲ್ಲೂ ಪ್ರಯಾಣ ಮಾಡಿಲ್ಲ,
ಬೆಂಗಳೂರು: HMPV ಹೊಸ ವೈರಸ್ ಅಲ್ಲ, ಇದು ಅಸ್ತಿತ್ವದಲ್ಲಿರುವ ವೈರಸ್. ಇದು ಭಾರತದ ಮೊದಲ ಪ್ರಕರಣವಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 8 ತಿಂಗಳ ಮಗುವೊಂದರಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಎಚ್‌ಎಂಪಿವಿ ಹೊಸ ವೈರಸ್ ಅಲ್ಲ. ಅಸ್ತಿತ್ವದಲ್ಲಿರು ವೈರಸ್. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ, ಭಾರತದಲ್ಲಿ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಆದರೆ, ಇದು ನಿಜವಲ್ಲ ಎಂದರು. ನಾವು ಪ್ಯಾನಿಕ್ ಬಟನ್ ಅನ್ನು ಒತ್ತಬೇಕು ಎಂದು ನಾನು ಭಾವಿಸುವುದಿಲ್ಲ, ಏಕೆಂದರೆ HMPV ಹೊಸ ವೈರಸ್ ಅಲ್ಲ, ಮಗುವಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಮಗು ಹಾಗೂ ಪೋಷಕರು ಸ್ಥಳೀಯರಾಗಿದ್ದು ಅವರು ಎಲ್ಲೂ ಪ್ರಯಾಣ ಮಾಡಿಲ್ಲ, ಇಲ್ಲಿ ಕಂಡುಬಂದಿರುವ ವೈರಸ್ಗೂ, ಚೀನಾ ವೇರಿಯಂಟ್ಗೂ ಎನು ಸಂಬಂಧವಿಲ್ಲ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ, ಇದನ್ನು HMPV ಯ ಹೊಸ ರೂಪಾಂತರ ಎಂದು ಹೇಳುತ್ತಿದ್ದಾರೆ, ಭಾರತ ಸರ್ಕಾರವು ನಮಗೆ ಇನ್ನೂ ಸಂಪೂರ್ಣ ವಿವರಗಳನ್ನು ನೀಡಿಲ್ಲ, ಪ್ರಸ್ತುತ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್ನ್ನು ಪುಣೆ ಲ್ಯಾಬ್ಗೆ ಕಳುಹಿಸುತ್ತೇವೆ. ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದರು.