For the best experience, open
https://m.samyuktakarnataka.in
on your mobile browser.

ISRO EOS 08 ಉಡಾವಣೆ ಯಶಸ್ವಿ

10:57 AM Aug 16, 2024 IST | Samyukta Karnataka
isro eos 08 ಉಡಾವಣೆ ಯಶಸ್ವಿ

ಇಸ್ರೋ ಸಂಸ್ಥೆ ಇಂದು ತನ್ನ EOS-8 ಮಿಷನ್​​​​​ ಯಶಸ್ವಿಯಾಗಿ ಉಡಾವಣೆ ನಡೆಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಡಾವಣೆಯನ್ನು ನಡೆಸಲಾಗಿದೆ. ಮಿಷನ್‌ನ ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಹಾರಾಟವಾಗಿದ್ದು. ಈ ಮಿಷನ್​​​ನ ಉಡಾವಣೆ SSLV ಯ ಅಭಿವೃದ್ಧಿಯ ಹಂತವನ್ನು ಸೂಚಿಸುತ್ತದೆ. EOS-8 ಮಿಷನ್‌ನ ಮೊದಲು ಗುರಿ ಅಂದರೆ ವಿಜ್ಞಾನದ ಪ್ರಕಾರ ಇದರ ಪ್ರಾಥಮಿಕ ಉದ್ದೇಶ ಮೈಕ್ರೋಸ್ಯಾಟಲೈಟ್ ಅಭಿವೃದ್ಧಿಪಡಿಸುವುದು ಹಾಗೂ ಮೈಕ್ರೋಸ್ಯಾಟಲೈಟ್ ಉಪಕರಣಕ್ಕೆ ಹೊಂದಿಕೆಯಾಗುವ ಪೇಲೋಡ್ ಯಂತ್ರವನ್ನು ಅಳವಡಿಸುವುದು. ಈ ಮೂಲಕ ಭವಿಷ್ಯದ ಉಪಗ್ರಹಗಳಿಗಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. SSLV ಇನ್ನು ಮುಂದೆ ಖಾಸಗಿ ಸಂಸ್ಥೆಗಳ ಹಾರಾಟಕ್ಕಷ್ಟೇ ಉಪಯೋಗಿಸಲ್ಪಡುತ್ತದೆ ಎಂದು ಇಸ್ರೋ ತಿಳಿಸಿದೆ.

Tags :