MSP ಯೋಜನೆಯಡಿ ಹೆಸರು ಕಾಳು: ಬೀದರ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳು
01:59 PM Aug 29, 2024 IST | Samyukta Karnataka
ಬೆಂಗಳೂರು: MSP ಯೋಜನೆಯಡಿ ಹೆಸರು ಕಾಳು ಖರೀದಿಸಲು ಬೀದರ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳು ಸ್ಥಾಪಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಬೀದರ ಜಿಲ್ಲೆಯ ರೈತರು ಬೆಳೆದಿರುವ ಮುಂಗಾರು ಬೆಳೆಯಾಗಿರುವ ಹೆಸರು ಕಾಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ(MSP) ಕ್ವಿಂಟಾಲ್ ಗೆ 8682 ರೂ ಎಂಬಂತೆ ರೈತರಿಂದ ಹೆಸರು ಕಾಳು ಖರೀದಿಸಲು ಸರ್ಕಾರ ತೀರ್ಮಾನ ಮಾಡಿದ್ದು ಬೀದರ ಜಿಲ್ಲೆಯಲ್ಲಿ ಒಟ್ಟು 30 ಖರೀದಿ ಕೇಂದ್ರಗಳು ಸ್ಥಾಪನೆ ಮಾಡಲಾಗಿದ್ದು ಹೆಸರು ಬೆಳೆ ಬೆಳೆದಿರುವ ರೈತರು ಇದರ ಲಾಭ ಪಡೆಯಬೇಕೆಂದು ಕೋರುತ್ತೇನೆ ಎಂದಿದ್ದಾರೆ.