For the best experience, open
https://m.samyuktakarnataka.in
on your mobile browser.

U19 ಏಷ್ಯಾಕಪ್​: ಚಾಂಪಿಯನ್ ಆದ ಭಾರತ

12:28 PM Dec 22, 2024 IST | Samyukta Karnataka
u19 ಏಷ್ಯಾಕಪ್​  ಚಾಂಪಿಯನ್ ಆದ ಭಾರತ

ಕೌಲಾಲಂಪುರ್: ಅಂಡರ್-19 ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇಂದು ನಡೆದ ಬಾಂಗ್ಲಾದೇಶ್ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಪಂದ್ಯದಲ್ಲಿ ಭಾರತ ವನಿತಾ ಅಂಡರ್ 19 ತಂಡವು 41 ರನ್ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 117 ರನ್‌ಗಳಿಸಿತು, ಬಾಂಗ್ಲಾದೇಶ ತಂಡವು 18.3 ಓವರ್ 76 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಟೀಮ್ ಇಂಡಿಯಾ 41 ರನ್​​ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Tags :