ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅಥ್ಲೀಟ್‌ನಂತಹ ಫಿಟ್ನೆಸ್ ಹೊಂದುವುದು ಹೇಗೆ?

07:08 PM Nov 16, 2024 IST | Samyukta Karnataka

ವರದಿ: ಮುಕುಂದ್ ಶೆಟ್ಟಿ
ಬೆಂಗಳೂರು: ಫಿಟ್ನೆಸ್ ಯುವಜನರಲ್ಲಿ ಸಾಕಷ್ಟು ಕ್ರೇಝ್ ಹೊಂದಿದೆ. ಅದೇ ರೀತಿ ಕೆಲ️ ತಪ್ಪುಗಳು ಕಲ️್ಪನೆಗಳು ಇವೆ. ಸೂಕ್ತವಾದ ಹಾಗೂ ಆರೋಗ್ಯಕರ ಫಿಟ್ನೆಸ್ ಹೊಂದುವುದು ಎಲ️್ಲರ ಕನಸ್ಸಾಗಿದ್ದರೂ, ಸೂಕ್ತ ಮಾರ್ಗದರ್ಶನವಿಲ️್ಲದೇ ಅದನ್ನು ಹೊಂದುವುದು ಅಸಮರ್ಪಕ. ಆದರಲ್ಲೂ, ಕ್ರೀಡಾಪಟುಗಳಿಗೆ ಫಿಟ್ನೆಸ್, ಡಯಟ್ ಅನಿವಾರ್ಯವಾಗಿದ್ದು, ಅದಕ್ಕೆ ತಕ್ಕಂತ ಬದ್ಧತೆ ಇದ್ದರೆ ಮಾತ್ರ ಪಡೆದುಕೊಳ್ಳಲು ಸಾಧ್ಯ.
ಅಥ್ಲೀಟ್‌ನಂತಹ ಫಿಟ್ನೆಸ್ ಬೇಕಾದರೆ ಕೇವಲ️ ಗಂಟೆಗಟ್ಟಲೇ ಜಿಮ್‌ನಲ್ಲಿ ವ್ಯಾಯಾಮ ಮಾಡಿದರೆ ಸಾಲ️ದು. ಸೂಕ್ತ ಮಾರ್ಗದರ್ಶನ ನೀಡುವ ಗುರುವಿನ ಅಪ್ರೋಗತ್ಯತೆ ಖಂಡಿತವಾಗಿಯೂ ಇರಲಿದೆ. ಹಾಗಾಗಿಯೇ, ಅಥ್ಲೀಟ್ಸ್ನಂತಹ ಫಿಟ್ನೆಸ್ ಅನ್ನು ಭವಿಷ್ಯದ ಕ್ರೀಡಾಪಟುಗಳಿಗೆ ನೀಡಲೆಂದೇ ಹೊಸ ಕೋರ್ಸ್ ಬಂದಿದೆ. ಆ ಕೋರ್ಸ್ ಹೆಸರೇ ಲೈಫ್ ಫೋರ್ಸ್ ಎಕ್ಸ್ಟ್ರಿಮ್.
ಎಲ್‌ಎಫ್‌ಎಕ್ಸ್ ಪ್ರೋಗ್ರಾಂ ಏನು?
ಸದ್ಯ ಈಗ ಜಿಮ್‌ನಲ್ಲಿ ಗಂಟೆಗಟ್ಟಲೇ ಬೆವರಳಿಸಿ ದೇಹದಾರ್ಢ್ಯ ಹೊಂದುವ ವ್ಯಾಯಾಮಗಳಿಗೂ ಎಲ್‌ಎಫ್‌ಎಕ್ಸ್ ಪ್ರೋಗ್ರಾಂಗೂ ಭಾರಿ ವ್ಯತ್ಯಾಸಗಳಿವೆ. ಅಥ್ಲೀಟ್ಸ್ನಂತಹ ಫಿಟ್ನೆಸ್ ಹೊಂದುವುದು ಎಲ್‌ಎಫ್‌ಎಕ್ಸ್ನಂತಹ ಪ್ರೋಗ್ರಾಂಗಳ ಅಗತ್ಯವಿದೆ. ಎಲ್‌ಎಫ್‌ಎಕ್ಸ್ ಫಿಟ್ನೆಸ್‌ನಲ್ಲಿ ಯೋಜಿತವಾದಂತಹ ಹಾಗೂ ಅಥ್ಲೀಟ್ಸ್ಗಳಾಗಲು ಮಾನಸಿಕ ಹಾಗೂ ದೈಹಿಕ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದಾಗಿದೆ.
ಕಳೆದ ೨೩ ವರ್ಷಗಳಿಂದ ಇದೇ ಫಿಟ್ನೆಸ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಅನುಭವಿ ಫಿಟ್‌ನೆಸ್ ತಜ್ಞ, ತರಬೇತುದಾರ ಸತೀಶ್ ರಾಮಪ್ಪ ರೂಪಿಸಿರುವ ಹೊಸ ಯೋಜನೆಯಾಗಿರುವ ಎಲ್‌ಎಫ್‌ಎಕ್ಸ್, ೧೨ ವಾರಗಳ ಕಾಲಾವಧಿಯನ್ನು ಹೊಂದಿದ್ದು, ಅಥ್ಲೀಟ್ ಸಂಪೂರ್ಣ ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧಗೊಳ್ಳಲು ಅನುಕೂಲ️ವಾಗಿರುತ್ತದೆ.
ಬಾಕ್ಸಿಂಗ್-ಯೋಗದಲ್ಲೂ ಪರಿಣಿತಿ
ಸತೀಶ್ ರಾಮಪ್ಪನವರ ಈ ಎಲ್‌ಎಫ್‌ಎಕ್ಸ್ ಪ್ರೋಗ್ರಾಂ, ಓರ್ವ ವ್ಯಕ್ತಿಯನ್ನು ಸಾಮಾನ್ಯರಿಂದ ಕ್ರೀಡಾಪಟುವಿನಂತಹ ದೇಹದಾರ್ಢ್ಯ ಹೊಂದಲ️Ä ಸಹಕಾರಿಯಾಗಲಿದ್ದು, ಇದರ ಜೊತೆಗೆ ಯೋಗ, ಶಕ್ತಿ ತರಬೇತಿ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನೂ ಒಳಗೊಂಡಿರುತ್ತದೆ. ಹೀಗಾಗಿಯೇ, ಇದು ಕೇವಲ️ ವ್ಯಕ್ತಿಯ ದೇಹವನ್ನು ಮಾತ್ರವಲ️್ಲದೆ ಮನಸ್ಸು, ಆತ್ಮ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉನ್ನತೀಕರಿಸುತ್ತದೆ.
ಒಂದು ರೀತಿ ಹೇಳುವುದಾದರೆ ಎಲ್‌ಎಫ್‌ಎಕ್ಸ್ ಪ್ರೋಗ್ರಾಂ ದೈಹಿಕ ದಂಡನೆಯ ಜೊತೆಗೆ ಧ್ಯಾನ ಮತ್ತು ಪ್ರಾಣಾಯಾಮ ಸೇರಿದಂತೆ ಮಾನಸಿಕ ಫಿಟ್‌ನೆಸ್ ಅನ್ನು ಪಡೆದುಕೊಳ್ಳುವುದಾಗಿರುತ್ತದೆ. ಇದು ಕೇವಲ️ ಫಿಟ್‌ನೆಸ್ ಪ್ರಯಾಣವಲ️್ಲ-ಇದು ಜೀವನಶೈಲಿಯ ರೂಪಾಂತರವಾಗಿದ್ದು, ಗ್ರಾಹಕರು ಏನು ತಿನ್ನಬೇಕು, ಯಾವಾಗ ತಿನ್ನಬೇಕು ಮತ್ತು ಹೇಗೆ ಚಲಿಸಬೇಕು ಎಂಬುದನ್ನು ಕಲಿಯುತ್ತಾರೆ, ಆರೋಗ್ಯಕರ, ಹೆಚ್ಚು ಉದ್ದೇಶಪೂರ್ವಕ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡಲಿದೆ.
ಮಕ್ಕಳಿಗೂ ಅನುಕೂಲ️ಕಾರಿ
ಸತೀಶ್ ರಾಮಪ್ಪನವರ ಆಡೋ ಫಿಟ್‌ನೆಸ್ ಅಕಾಡೆಮಿಯಲ್ಲಿ ಈ ಎಲ್‌ಎಫ್‌ಎಕ್ಸ್ ಪ್ರೋಗ್ರಾಂ ಜಾರಿಯಲಿದೆ. ವಿಶೇಷವೆಂದರೆ, ಇದನ್ನು ವಯಸ್ಕರ ಜೊತೆಗೆ ಮಕ್ಕಳು ಕೂಡ ಈ ಎಲ್‌ಎಫ್‌ಎಕ್ಸ್ ಪ್ರೋಗ್ರಾಂ ಅನುಸರಿಸಬಹುದು. ಮಕ್ಕಳ ಶಕ್ತಿ, ಹೃದಯ, ಮಾನಸಿಕ ಸಮತೋಲ️ನ ಮತ್ತು ಕಾರ್ಯಕ್ಷಮತೆಯ ಕೌಶಲ️್ಯಗಳನ್ನು ಸುಧಾರಿಸುವ ಮೂಲ️ಕ ಚಿಕ್ಕ ವಯಸ್ಸಿನಿಂದಲೇ ಫಿಟ್‌ನೆಸ್‌ನತ್ತ ಮಕ್ಕಳಲ್ಲಿ ಆಸಕ್ತಿ ಕೆರಳಿಸುವಂತಿದೆ.
೨೦೨೧ ರಲ್ಲಿ, ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಿದ್ದ ಆಡೋ ಫಿಟ್ನೆಸ್ ಸೆಂಟರ್, ಕ್ರೀಡಾಪಟುಗಳಿಗೆ ಅಗತ್ಯವಾದ ಫಿಟ್ನೆಸ್ ನೀಡುವಲ್ಲಿ ದಿಟ್ಟ ಹೆಜ್ಜೆಯನ್ನಟ್ಟಿದೆ.
ಬಾಕ್ಸಿಂಗ್, ಕರಾಟೆಯಲ್ಲೂ ನಿಪುಣ
ಸತೀಶ್ ರಾಮಪ್ಪನವರದ್ದು ಕೇವಲ️ ಫಿಟ್ನೆಸ್ ಪ್ರೋಗ್ರಾಂಗಳನ್ನು ಸಿದ್ಧಪಡಿಸಿ, ಯುವ ಜನರಲ್ಲಿ ಆಸಕ್ತಿ ಮೂಡಿಸುವದಷ್ಟೇ ಅಲ️್ಲ, ಮಕ್ಕಳಲ್ಲಿ ಫಿಟ್ನೆಸ್‌ನ ಜೊತೆಗೆ ಬಾಕ್ಸಿಂಗ್ ಹಾಗೂ ಕರಾಟೆ ಕಲೆಯನ್ನೂ ಕಲಿಸುವುದು ಗುರಿಯಾಗಿಟ್ಟುಕೊಂಡಿದ್ದಾರೆ. ಹಾಗಾಗಿ, ಇವರ ಬತ್ತಳಿಕೆಯಿಂದ ಈಗಾಗಲೇ, ಸಾವಿರಾರು ಮಂದಿ ಉತ್ತಮ ಆರೋಗ್ಯದೊಂದಿಗೆ ಕ್ರೀಡಾಪಟುಗಳಾಗಿದ್ದು, ನೀವೂ ಇವರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬಹುದು.

Next Article