ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನುಗ್ರಹ ಸಂಗೀತ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವ

12:21 PM Jan 17, 2025 IST | Samyukta Karnataka

3 ದಿನ ಶ್ರೀ ಪುರಂದರ- ತ್ಯಾಗರಾಜರ ಆರಾಧನೋತ್ಸವ: ಡಾ. ಕೆ.ಎಸ್. ಚೈತಾಲಿ, ಎ.ಆರ್. ರಘುರಾಮ, ಹಿರಿಯಣ್ಣ ಮತ್ತು ವಿದ್ವಾಂಸ ಪಿ.ಎಸ್. ಪ್ರಸನ್ನ ಕುಮಾರ್‌ಗೆ ವಿಶೇಷ ಸನ್ಮಾನ

ತುಮಕೂರು : ನಗರದ ಪ್ರತಿಷ್ಠಿತ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ಜ. 17 ರಿಂದ ನಗರದಲ್ಲಿ 3 ದಿನ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ - ಸದ್ಗುರು ಶ್ರೀ ತ್ಯಾಗರಾಜರ ಸ್ವಾಮಿಗಳ 25ನೇ ವರ್ಷದ ಆರಾಧನಾ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವೇಕಾನಂದ ರಸ್ತೆ ಮಾಕಂ ಕಲ್ಯಾಣ ಮಂಟಪದಲ್ಲಿ ವಿಶೇಷ ಸಂಗೀತ ಮಹೋತ್ಸವಕ್ಕೆ 17ರ ಸಂಜೆ 5:30ಕ್ಕೆ ಚಾಲನೆ ದೊರಕಲಿದೆ. ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ, ಉದ್ಯಮಿ ಎಂ.ಆರ್. ಅರವಿಂದ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯಾಲಯದ ವಿದ್ಯಾರ್ಥಿಗಳಿಂದ ವಂದೇ ಮಾತರಂ- ಸಂಪೂರ್ಣ ಸಾಹಿತ್ಯದ ಸಾಮೂಹಿಕ ಗಾಯನವಿದೆ. ನಂತರ ವಿದುಷಿ ದೀಪ್ತಿ - ರಮಾ ಪ್ರಸನ್ನ ನೇತೃತ್ವದಲ್ಲಿ 15 ವೀಣಾ ಕಲಾವಿದರಿಂದ ಏಕಕಾಲಕ್ಕೆ ವೀಣಾವಾದನ ಝೇಂಕಾರವಿದೆ. 18ರ ಬೆಳಗ್ಗೆ 10ಕ್ಕೆ ತ್ಯಾಗರಾಜರ ಆರಾಧನೋತ್ಸವ ಅಂಗವಾಗಿ 11ಕ್ಕೆ ಶ್ರೀ ತ್ಯಾಗರಾಜರ ‘ಘನರಾಗ ಪಂಚ ರತ್ನ’ ಕೃತಿಗಳ ಗೋಷ್ಠಿ ಗಾಯನವಿದೆ.

ವಿವಿಧ ರಂಗದ ಸಾಧಕರಿಗೆ ಸನ್ಮಾನ: ಶನಿವಾರ ಸಂಜೆ 6ಕ್ಕೆ ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ‘ಗುರು ಪೂರ್ಣಿಮಾರ್ಚನಂ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಬೆಳ್ಳಿಹಬ್ಬದ ಅಂಗವಾಗಿ ವಿವಿಧ ರಂಗದ ಸಾಧಕರಾದ ಕನ್ನಡ ಪ್ರಾಧ್ಯಾಪಕಿ ಡಾ. ಕೆ.ಎಸ್. ಚೈತಾಲಿ, ಲೇಖಕ , ವಿಜಯವಾಣಿ ಮುಖ್ಯ ಉಪ ಸಂಪಾದಕ ಎ.ಆರ್. ರಘುರಾಮ, ಖ್ಯಾತ ಬಾಣಸಿಗ ಹಿರಿಯಣ್ಣ ಮತ್ತು ಪಿಟೀಲು ವಿದ್ವಾಂಸ ಪಿ.ಎಸ್. ಪ್ರಸನ್ನ ಕುಮಾರ್ ಅವರಿಗೆ ವಿಶೇಷ ಸನ್ಮಾನ ನೆರವೇರಲಿದೆ ಎಂದು ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ತಿಳಿಸಿದ್ದಾರೆ.

ನವರತ್ನ ಮಾಲಿಕೆ ಗೋಷ್ಠಿ: 19ರ ಬೆಳಗ್ಗೆ 10ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವನಾಮ, 12ಕ್ಕೆ ಶ್ರೀ ಪುರಂದರದಾಸರ ‘ನವರತ್ನ ಮಾಲಿಕೆ’ ಗೋಷ್ಠಿ ಗಾಯನ, ಸಂಜೆ 5ಕ್ಕೆ ದೇವರ ನಾಮ- ಕಲಿಕಾ ಶಿಬಿರದ ಸಮಾರೋಪವಿದೆ. ಕಲಾಸಕ್ತರು ಆಗಮಿಸಬೇಕು ಎಂದು ವಿದ್ವಾನ್. ಜೆ.ಎಸ್. ಶ್ರೀಕಂಠ ಭಟ್ ಕೋರಿದ್ದಾರೆ.

Next Article