ಅನುಮಾನಾಸ್ಪದ ವಹಿವಾಟು ಮರೆಮಾಚಲು ಮೋದಿ ಸರ್ಕಾರ ಎಸ್‌ಬಿಐ ಬಳಸುತ್ತಿದೆ
ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಯ ವಿವರಗಳನ್ನು ಬಹಿರಂಗಪಡಿಸಲು ಹೆಚ್ಚಿನ ಸಮಯ ಕೋರಿ ಎಸ್‌ಬಿಐ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ
ನವದೆಹಲಿ: ಮೋದಿ ಸರ್ಕಾರವು ಚುನಾವಣಾ ಬಾಂಡ್‌ಗಳ ಮೂಲಕ ತನ್ನ ಸಂಶಯಾಸ್ಪದ ವ್ಯವಹಾರಗಳನ್ನು ಮರೆಮಾಡಲು ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಅನ್ನು ಗುರಾಣಿಯಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು ಸುಪ್ರೀಂ ಕೋರ್ಟ್ ಮಾರ್ಚ್ 6 ರೊಳಗೆ ದಾನಿಗಳ ವಿವರಗಳನ್ನು ಒದಗಿಸುವಂತೆ ಎಸ್‌ಬಿಐಗೆ ಕೇಳಿದೆ ಆದರೆ ಲೋಕಸಭೆ ಚುನಾವಣೆಯ ನಂತರವೇ ಬಿಜೆಪಿ ತನ್ನ ವಿವರಗಳನ್ನು ಹೊರತರಬೇಕೆಂದು ಬಯಸುತ್ತದೆ, ಆದ್ದರಿಂದ ಎಸ್‌ಬಿಐ ಜೂನ್ ಅಂತ್ಯದವರೆಗೆ ಸಮಯ ಕೇಳಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ಲೋಕಸಭೆ ಚುನಾವಣೆ ನಂತರ ಇದನ್ನು ಮಾಡಬೇಕೆಂದು ಬಿಜೆಪಿ ಬಯಸುತ್ತದೆ. ಈ ಲೋಕಸಭೆಯ ಅಧಿಕಾರಾವಧಿಯು ಜೂನ್ 16 ರಂದು ಕೊನೆಗೊಳ್ಳಲಿದೆ ಮತ್ತು SBI ಜೂನ್ 30 ರೊಳಗೆ ಡೇಟಾವನ್ನು ಹಂಚಿಕೊಳ್ಳಲು ಬಯಸುತ್ತದೆ. ಈ ಮೋಸದ ಯೋಜನೆಯ ಪ್ರಮುಖ ಫಲಾನುಭವಿ ಬಿಜೆಪಿ' ಎಂದು ಖರ್ಗೆ ಟೀಕಿಸಿದ್ದಾರೆ.