ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ: ವಿಚಿತ್ರವಾದ ಶಬ್ದದಿಂದ ಸ್ಥಳೀಯರಲ್ಲಿ ಆತಂಕ

01:06 PM Sep 25, 2024 IST | Samyukta Karnataka

ಸೆನ್ಸಾರ್​ ಸೂಟ್​ಕೇಸ್ ಆಗಿದ್ದು, ಸೂಟ್ ಕೇಸ್ ತೆರೆಯಲು ಬೆಂಗಳೂರಿನಿಂದ ಬಾಂಬ್ ತಜ್ಞರ ತಂಡ ಆಗಮನಿಸುತ್ತಿದೆ.

ಕೋಲಾರ: ನಗರದ ಹೊರವಲಯದ ಟಮಕ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೂಟ್​ಕೇಸ್ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಸೂಟ್​ಕೇಸ್​ನಿಂದ ನಿರಂತರವಾಗಿ ವಿಚಿತ್ರ ಶಬ್ದ ಬರುತ್ತಿರುವ ಹಿನ್ನಲೆಯಲ್ಲಿ, ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಗಲ್​ಪೇಟೆ ಠಾಣೆ ಪೊಲೀಸರು, ಎಸ್​ಪಿ ನಿಖಿಲ್​, ಹೆಚ್ಚುವರಿ ಎಸ್​ಪಿ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ, ಅದು ಕ್ರೌನ್​ ಕಂಪನಿಯ ಸೂಟ್​​ಕೇಸ್​​​ ಆಗಿದ್ದು. ಯಾರೋ ಲಾಕರ್​ ಪಾಸ್ವರ್ಡ್​ ಅನ್ನು ತಪ್ಪಾಗಿ ​ಹಾಕಿದ್ದರಿಂದ ಶಬ್ದ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ, ಸೆನ್ಸಾರ್​ ಸೂಟ್​ಕೇಸ್ ಆಗಿದ್ದು, ಸೂಟ್ ಕೇಸ್ ತೆರೆಯಲು ಬೆಂಗಳೂರಿನಿಂದ ಬಾಂಬ್ ತಜ್ಞರ ತಂಡ ಕೋಲಾರಕ್ಕೆ ಆಗಮನಿಸುತ್ತಿದ್ದು. ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಾಷ್ಟ್ರೀಯ ಹೆದ್ದಾರಿ-75 ರ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದೆ. ಬಾಂಬ್ ಆತಂಕ ಮೂಡಿಸಿರುವ ಸೂಟ್ ಕೇಸ್ ನೋಡಲು ಜನ ಜಮಾಯಿಸುತ್ತಿದ್ದಾರೆ.

Tags :
#ಕೋಲಾರ#ಸೂಟ್​ಕೇಸ್​
Next Article