For the best experience, open
https://m.samyuktakarnataka.in
on your mobile browser.

ಕೌಟುಂಬಿಕ ಕಲಹ: ಯೋಧನ ಪತ್ನಿ ಆತ್ಮಹತ್ಯೆ

04:04 PM Jun 14, 2024 IST | Samyukta Karnataka
ಕೌಟುಂಬಿಕ ಕಲಹ  ಯೋಧನ ಪತ್ನಿ ಆತ್ಮಹತ್ಯೆ

ಚಿಕ್ಕೋಡಿ: ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತಳ‌ ಪತಿ ಬಾಳು ರೂಪನವರ ಅವರು ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಧ ಬಾಳು ಅರುಣಾಚಲ ಪ್ರದೇಶ ಗ್ಯಾಂಟುಕನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೂಪಾಬಾಯಿ ಬಾಳು ರೂಪನವರ (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ.