ಕ್ರೂಸರ್ ವಾಹನ ಪಲ್ಟಿ : ಮೂವರು ಮಹಿಳೆಯರು ಸಾವು
04:03 PM May 11, 2024 IST | Samyukta Karnataka
ಬೆಳಗಾವಿ: ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಬಳಿ ಈ ಘಟನೆ ನಡೆದಿದೆ, ಕೆಲಸಕ್ಕಾಗಿ ಕಾರ್ಮಿಕರು ಕ್ರೂಸರ್‌ನಲ್ಲಿ ಹೋಗುವಾಗ ಕ್ರೂಸರ್ ಟೈರ್ ಬ್ಲಾಸ್ಟ್ ಆಗಿ ಗಾಡಿ ಪಲ್ಟಿಯಾಗಿದ್ದು. ಮಹಾದೇವಿ ಚೌಗಲಾ, ಗೀತಾ ದೊಡಮನಿ ಹಾಗೂ ಕಸ್ತೂರಿ, ಅಪಘಾತದಲ್ಲಿ ಸಾವನ್ನಪ್ಪಿದ ರ್ದುದೈವಿಗಳು ಆಗಿದ್ದಾರೆ. ಹಲವರಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.