For the best experience, open
https://m.samyuktakarnataka.in
on your mobile browser.

ಗೋಹತ್ಯೆ ನಿಷೇಧ ನಾಮಕಾವಸ್ಥೆ: ತೂಬಿನಕೆರೆಯಲ್ಲಿ ಗೋವಿನ ಮೂಳೆಗಳ ರಾಶಿ

08:44 PM Dec 18, 2023 IST | Samyukta Karnataka
ಗೋಹತ್ಯೆ ನಿಷೇಧ ನಾಮಕಾವಸ್ಥೆ  ತೂಬಿನಕೆರೆಯಲ್ಲಿ ಗೋವಿನ ಮೂಳೆಗಳ ರಾಶಿ

ಮಂಡ್ಯ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋ ಹತ್ಯೆ ಅನ್ನೋದು ಅವ್ಯಹತವಾಗಿ ನಡೀತಿದೆಯಾ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ.
ತೂಬಿನಕೆರೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿದ್ದ ಶೆಡ್ ನಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆಯಾಗಿವೆ. ನೂರಾರು ಗೋವಿನ ತಲೆ ಮೂಳೆ, ಬೆನ್ನು ಮೂಳೆ ಸೇರಿದಂತೆ ಅಪಾರ ಪ್ರಮಾಣದ ಮೂಳೆಗಳು ಪತ್ತೆಯಾಗಿದೆ, ಮಂಡ್ಯ ತಾಲೂಕಿನ ತೂಬಿನ ಕೆರೆ ಗ್ರಾಮದಲ್ಲಿ ನಿಂಗರಾಜು ಎಂಬುವರ ಜಮೀನಿನಲ್ಲಿ ಪತ್ತೆಯಾಗಿರೊ ಮೂಳೆಗಳ ರಾಶಿ. ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೆ ಶೆಡ್ ನಿರ್ಮಿಸಲು‌ ಅವಕಾಶ ಕೊಟ್ಟಿದ್ದ ನಿಂಗರಾಜು. ಶೆಡ್ ನಿರ್ಮಿಸುವ ವೇಳೆ ಕಬ್ಬಿಣ ಹಾಕುವುದಾಗಿ ಹೇಳಿದ್ದ ಅನ್ಯಕೋಮಿನ ವ್ಯಕ್ತಿ. ಸ್ಥಳೀಯರಿಗೆ ಕಬ್ಬಿಣ ಹಾಕಲು ಶೆಡ್ ನಿರ್ಮಿಸುತ್ತಿರುವುದಾಗಿ ಹೇಳಿದ್ದ ಆ ವ್ಯಕ್ತಿ. ನಂತ್ರ ಶೆಡ್ ನಿಂದ ಬಾರೀ ಪ್ರಮಾಣದಲ್ಲಿ ಬರ್ತಿದ್ದ ದುರ್ನಾತ. ದನಕರು ಮೇಯಿಸಲು ಬರುತ್ತಿದ್ದವರಿಗೆ, ಸುತ್ತಮುತ್ತಲ ಜಮೀನಿನಲ್ಲಿ ಕೆಲಸ ಮಾಡುವವರಿಗೆ ಬೀರುತ್ತಿದ್ದ ದುರ್ನಾತ. ದುರ್ನಾತ ತಡೆಯಲಾಗದೆ ಶೆಡ್ ಬಾಗಿಲು ತೆಗೆದು ನೋಡಿದ ಗ್ರಾಮದ ಯುವಕರು. ಶೆಡ್ ನಲ್ಲಿದ್ದ ರಾಶಿ ರಾಶಿ ಗೋವುಗಳ ಮೂಳೆಗಳನ್ನ ಕಂಡು ದಂಗಾದ ಯುವಕರು. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆ ಕೇಸ್ ಮಾಸುವ ಮುನ್ನವೇ ಸದ್ದು ಮಾಡುತ್ತಿರೊ ಮೂಳೆಗಳ ರಾಶಿ. ಈ ಮೂಳೆಗಳನ್ನ ಪೌಡರ್ ಮಾಡಿ ಆಲೆ ಮನೆಗಳಿಗೆ ಬಳಕೆ ಮಾಡಲಾಗ್ತಿತ್ತು ಎಂಬ ಆರೋಪವೂ ಕೇಳಿ ಬಂದಿದ್ದು ಇದ್ರ ಬಗೆಗೂ ತನಿಖೆ ನಡೆಸುವಂತೆ ಒತ್ತಾಯಿಸ್ತಿರೊ ಗ್ರಾಮಸ್ಥರು.
ಈ ಸಂಬಂಧ ಸ್ಥಳೀಯ ಪಿಡಿಒ ಗಮನಕ್ಕೆ ತಂದರೂ ಶೆಡ್ ತೆರವುಗೊಳಿಸ್ತಿಲ್ಲ ಕೂಡಲೇ ಕ್ರಮ ಕೈಗೊಂಡು ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.