For the best experience, open
https://m.samyuktakarnataka.in
on your mobile browser.

ಅಪಹಾಸ್ಯ… ಸಾಮಾಜಿಕ ಮಾಲಿನ್ಯ

04:07 AM Sep 06, 2024 IST | Samyukta Karnataka
ಅಪಹಾಸ್ಯ… ಸಾಮಾಜಿಕ ಮಾಲಿನ್ಯ

ಹಾಸ್ಯೋತ್ಸವ ಮನರಂಜನಾ ಕೂಟ ನಗೆ ಹಬ್ಬ ಮುಂತಾದ ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳನ್ನು ಪರೋಕ್ಷವಾಗಿ ಹಾಸ್ಯ, ಅಣಕು, ಕುಚೋದ್ಯ, ಲೇವಡಿ ಅಪಹಾಸ್ಯಗಳಿಂದ ಸಂಬೋಧಿಸಿ ಪ್ರೇಕ್ಷಕರನ್ನು ನಗಿಸುತ್ತಾರೆ. ಹಲವಾರು ಪ್ರದರ್ಶನಗಳಲ್ಲಿ ಊನಾಂಗರು, ವಿಕಲಚೇತನರನ್ನು ಸಹ ಗೇಲಿ ಮಾಡಲಾಗುತ್ತದೆ. ಇದು ಅಲ್ಲಲ್ಲಿ ಆಗುವ ನಮ್ಮ ಸಾಮಾಜಿಕ ಮನರಂಜನೆಯ ಸಾಮಾನ್ಯ ನೋಟ.
ಇನ್ನೊಬ್ಬರಲ್ಲಿಯ ದೌರ್ಬಲ್ಯ, ಅಸಹಾಯಕತೆಯನ್ನು ಗೇಲಿ ಮಾಡುವುದಾಗಲಿ ಅಪಹಾಸ್ಯ ಮಾಡುವುದಾಗಲಿ ಅಥವಾ ಯಾವುದಾದರೂ ಒಂದು ಹೆಸರಿನಿಂದ ಅಣಕಿಸುವುದು ಆಗಲಿ ಇತ್ಯಾದಿಗಳಿಂದ ಸಮಾಜ ಅನಾರೋಗ್ಯದತ್ತ ಸಾಗುತ್ತದೆ. ಇದೊಂದು ಸಾಂಸ್ಕೃತಿಕ ಮಾಲಿನ್ಯವೆಂದು ಅನೇಕ ನಾಗರಿಕ ಸಮಾಜಗಳು ಹೇಳುತ್ತವೆ.
ಕುರಾನಿನಲ್ಲಿ ಇಂಥವುಗಳನ್ನು ಬಲವಾಗಿ ಖಂಡಿಸಿ ನಿಷೇಧಿಸಲಾಗಿದೆ (ಅಧ್ಯಾಯ ಹುಜುರಾತ್ ೪೯:೧೧) ಒಂದು ಗುಂಪು ಇನ್ನೊಂದು ಗುಂಪನ್ನು ಗೇಲಿ ಮಾಡಬಾರದು, ಯಾರನ್ನೂ ಕುಚೋದ್ಯದಿಂದ ಅಡ್ಡ ಹೆಸರಿನಿಂದ ಕರೆಯಬಾರದು'. ಇನ್ನೊಂದು ವಚನ (೬:೧೦೮)ಬೇರೆ ಬೇರೆ ದೇವತೆಗಳನ್ನು ಪೂಜಿಸುವವರನ್ನು ಅಥವಾ ಪ್ರಾರ್ಥಿಸುವವರನ್ನು ಮೂದಲಿಸಬೇಡಿ' ಎಂದು ಉಪದೇಶಿಸಿ ಇನ್ನೊಂದು ಅಧ್ಯಾಯ ಅತ್ತೌಬ ದಲ್ಲಿ ಗೇಲಿ ಮಾಡುವವನಿಗೆ ಅಲ್ಲಾಹನಿಂದ ಕಠಿಣ ಶಿಕ್ಷೆ ಕಾದಿದೆ ಎಂದು ಹೇಳಲಾಗಿದೆ.
ಒಬ್ಬ ವಿದ್ವಾಂಸರು, ಇನ್ನೊಬ್ಬರ ಅಪಹಾಸ್ಯ ಮಾಡುವವರನ್ನು ಅದು ಅವರ ಮೊದಲ ಹಾಗೂ ಕೊನೆಯ ವಾದವಾಗಿದೆ' ಎಂದಿದ್ದಾರೆ. ಇನ್ನೊಬ್ಬ ವಿದ್ವಾಂಸರುಅಪಹಾಸ್ಯ ಬುದ್ಧಿಯ ದಾರಿದ್ರ್ಯ' ಎಂದಿದ್ದಾರೆ.
ಅತ್ಯುತ್ತಮ ಮನುಷ್ಯನೆಂದರೆ ಕೇವಲ ಪ್ರಾರ್ಥನೆ ನಮಾಜ(ಹಲವಾರು ಬಾರಿ ನಿರ್ವಹಿಸುವುದು) ಮಾಡುವವನಲ್ಲ. ತನ್ನ ನಾಲಿಗೆ ಕೈಗಳಿಂದ ಇತರರನ್ನು ಗೌರವದಿಂದ ಸಂಬೋಧಿಸುವುದು. ಅವರೊಂದಿಗೆ ವ್ಯವಹರಿಸುವವನು ಬಾಯಿ, ಕೈಗಳಿಂದ ಇತರರಿಗೆ ಹಾನಿಯಾಗದಂತೆ ಇರುವುದೇ ಇಸ್ಲಾಮಿನ ಸೌಂದರ್ಯವೆಂದು ಇಸ್ಲಾಮಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಇತರರು ನಮಗಿಂತ ಉತ್ತಮರಾಗಿರಲು ಸಾಧ್ಯವಿದೆ. ನಾವೆಲ್ಲರೂ ಅನೇಕ ದೌರ್ಬಲ್ಯಗಳನ್ನು ಹೊಂದಿದ್ದೇವೆ. ಕುರಾನ್ ಹೇಳುತ್ತದೆ ಮನುಷ್ಯ ದೌರ್ಬಲ್ಯಗಳ ಸಮೂಹ' ಎಂದು.ಯಾರಾದರು ತಿಳಿದೋ ತಿಳಿಯದೋ ಒಬ್ಬ ನನ್ನು ಅಥವಾ ಗುಂಪನ್ನು ಅಪಹಾಸ್ಯ ಮಾಡಿದರೆ ಗೇಲಿ ಮಾಡಿದರೆ ಕೂಡಲೇ ಗೇಲಿಗೆ ಒಳಗಾದ ವ್ಯಕ್ತಿಯ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲ ದೇವರಲ್ಲಿಯೂ ಕ್ಷಮೆ ಯಾಚಿಸಬೇಕು' ಇಂದು ಹೇಳಿದೆ.
ಪ್ರತಿಯೊಬ್ಬನು ಆದರ್ಶ ಸಮಾಜದ ನಿರ್ಮಾಣದಲ್ಲಿ ತೊಡಗಬೇಕು. ಪರಸ್ಪರ ದೂಷಣೆ ಕುಚೋದ್ಯ ಮುಂತಾದವುಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವು. ಇವು ಅಲ್ಲಾಹನನ್ನು ಮೆಚ್ಚಿಸಲಾರವು ಇಂತಹ ಹಲವಾರು ನಿದರ್ಶನಗಳನ್ನು ಪ್ರವಾದಿವರ್ಯ ಮಹಮ್ಮದ್ (ಸ) ತಮ್ಮ ವಚನ (ಹದೀಸ್) ಗಳಲ್ಲಿ ಹೇಳಿದ್ದಾರೆ.