For the best experience, open
https://m.samyuktakarnataka.in
on your mobile browser.

ಅಮೃತ ಸಮಾಚಾರ

11:32 AM Jan 18, 2024 IST | Samyukta Karnataka
ಅಮೃತ ಸಮಾಚಾರ

೭೫ ವರ್ಷಗಳ ಹಿಂದೆ… ೧೮-೦೧-೧೯೪೯ ಮಂಗಳವಾರ

ಕಾಂಗ್ರೆಸ್ಸಿಗರು ಸ್ವಾರ್ಥಿಗಳಾಗದಿರಲಿ
ಮದ್ರಾಸ ತಾ. ೧೭- ಯಾವ ಕಾಂಗ್ರೆಸ್ಸಿಗನೂ, ಅದರಲ್ಲಿಯೂ ಆಯ್ಕೆ ಹೊಂದಿದ ಸಂಸ್ಥೆಗಳ ಸದಸ್ಯರು, ನೌಕರಿಗಳಿಗೆ ಹುರಿಯಾಳುಗಳಣ್ನು ಸೂಚಿಸುವಲ್ಲಿ, ಆಯಾತ ನರ‍್ಯಾತ ಪರವಾನಗಿ ಪಡೆದುಕೊಳ್ಳುವಲ್ಲಿ, ತಮಗಾಗಿ ಇಲ್ಲವೆ ತಮ್ಮ ಸ್ನೇಹಿತರಿಗಾಗಿ ಅಂಗಡಿ ಲಾಯಸೆನ್ಸುಗಳನ್ನು ಸಂಪಾದಿಸುವಲ್ಲಿ ಆಸ್ಥೆ ವಹಿಸಬಾರದು ಮತ್ತು ನ್ಯಾಯಾಲಯಗಳಲ್ಲಿ ನಡೆದಿರುವ ದಿವಾಣಿ ಮತ್ತು ಫೌಜದಾರೀ ಖಟ್ಲೆಗಳ ವಿಷಯದಲ್ಲಿ ಸಂಬಂಧಿಸಿದ ಪೋಲೀಸ ಇಲ್ಲವೆ ನ್ಯಾಯ ಶಾಖೆಯ ಅಧಿಕಾರಿಗಳನ್ನು ಕಾಣಬಾರದು ಎಂದು ರಾಷ್ಟ್ರಪತಿಗಳಾದ ಡಾ. ಪಟ್ಟಾಭಿಯವರು ಕಾಂಗ್ರೆಸ್ಸಿಗರು ಮಾರ್ಗದರ್ಶನಕ್ಕಾಗಿ ಇಂದು ಒಂದು ಸೂಚನಾಪತ್ರವನ್ನು ಹೊರಡಿಸಿದ್ದಾರೆ.

ಭಾರತವು ಅತಿ ವರ್ಚಸ್ವಿ ರಾಷ್ಟ್ರವಾಗುವದು
ಕಟಕ ೧೬- ನನ್ನ ಜೀವಮಾನದಲ್ಲಿಯೇ ಭಾರತವು ಅತಿ ವರ್ಚಸ್ವಿಯಾದ ಮಹಾ ರಾಷ್ಟ್ರವಾಗುವದು ಎಂದು ಭಾರತದಲ್ಲಿ ಅಮೇರಿಕೆಯ ರಾಯಭಾರಿಗಳಾದ ಲಾಯ ಹೆಂಡರಸನ್ನರು ಒಂದು ಪತ್ರಿಕಾ ಪರಿಷತ್ತಿನಲ್ಲಿ ಹೇಳಿದರು. ಭಾರತ ಮತ್ತು ಅಮೇರಿಕೆಗಳಲ್ಲಿ ಸಂಪೂರ್ಣ ಪರಸ್ಪರ ತಿಳುವಳಿಕೆಯನ್ನುಂಟು ಮಾಡಿ ಸೌಹಾರ್ದ ಭಾವನೆಯನ್ನು ಹುಟ್ಟಿಸುವದಕ್ಕಾಗಿಯೇ ತಮ್ಮ ಎಲ್ಲ ಶಕ್ತಿಯನ್ನು ವ್ಯಯಿಸುವರಾಗಿ ಅವರು ನುಡಿದರು. ಎರಡೂ ರಾಷ್ಟ್ರಗಳು ಒಂದಕ್ಕೊಂದು ಹೆಗಲಿಗೆ ಹೆಗಲು ಹಚ್ಚಿ ಮುಂದೆ ಸಾಗಿದಲ್ಲಿ ಜಗತ್ತಿನಲ್ಲಿ ಒಳ್ಳೇ ವರ‍್ಚಸ್ಸು ಮತ್ತು ಆದರಗಳನ್ನು ಪ್ರಸ್ಥಾವಿಸುವದರಲ್ಲಿ ಸಂಶಯವಿಲ್ಲವೆಂದು ಅವರ ಅಭಿಪ್ರಾಯ ವ್ಯಕ್ತ ಮಾಡಿದರು.