For the best experience, open
https://m.samyuktakarnataka.in
on your mobile browser.

ಜೀವಮಾನದಲ್ಲೇ ಮೋದಿ ಸಂವಿಧಾನ ಓದಿಲ್ಲ

10:05 PM Nov 14, 2024 IST | Samyukta Karnataka
ಜೀವಮಾನದಲ್ಲೇ ಮೋದಿ ಸಂವಿಧಾನ ಓದಿಲ್ಲ

ನಂದೂರ್‌ಬಾರ್: ಪ್ರಧಾನಿ ನರೇಂದ್ರ ಮೋದಿ ಅವರು ಜೀವನದಲ್ಲೇ ಸಂವಿಧಾನವನ್ನು ಓದಿಲ್ಲ. ಹಾಗಾಗಿ ನನ್ನ ಹತ್ತಿರ ಇರುವ ಕೆಂಪು ಪುಸ್ತಕ ಖಾಲಿ ಇದೆ ಎಂದು ಭಾವಿಸಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೋದಿಗೆ ಟಾಂಗ್ ಕೊಟ್ಟರು.
ಗುರುವಾರ ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಭಾರತದ ಆತ್ಮವನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಆದರ್ಶಗಳಾದ ಡಾ. ಬಿ.ಆರ್.ಅಂಬೇಡ್ಕರ್, ಬಿರ್ಸಾ ಮುಂಡಾ ಹಾಗೂ ಮಹಾತ್ಮ ಗಾಂಧಿಯವರ ತತ್ವಗಳನ್ನೂ ಒಳಗೊಂಡಿದೆ ಎಂದು ಹೇಳಿದರು.
ನನ್ನ ಹತ್ತಿರ ಇರುವ ಸಂವಿಧಾನ ಪುಸ್ತಕದ ಕೆಂಪು ಬಣ್ಣಕ್ಕೆ ಬಿಜೆಪಿಯ ಆಕ್ಷೇಪವಿದೆ. ಆದರೆ ಈ ಪುಸ್ತಕದ ಬಣ್ಣ ಕೆಂಪೋ, ನೀಲಿಯೋ ಅದರ ಬಗ್ಗೆ ನಮಗೆ ಚಿಂತೆಯಿಲ್ಲ. ನಾವು ಸಂವಿಧಾನ ರಕ್ಷಣೆಗೆ ಪಣತೊಟ್ಟಿದ್ದೇವೆ ಮತ್ತು ಅದಕ್ಕೆ ಬದ್ಧರಾಗಿದ್ದೇವೆ ಎಂದರು.
ಮೋದಿಯವರೇ ನನ್ನ ಬಳಿ ಇರುವ ಸಂವಿಧಾನ ಪುಸ್ತಕ ಖಾಲಿ ಇಲ್ಲ. ಭಾರತದ ಆತ್ಮ ಮತ್ತು ಜ್ಞಾನವನ್ನು ಈ ಪುಸ್ತಕ ಒಳಗೊಂಡಿದೆ. ಈ ಪುಸ್ತಕವನ್ನು ಖಾಲಿ ಎಂದು ಕರೆದು ಅವಮಾನಿಸಿದ್ದೀರಿ ಎಂದರು. ಆದಿವಾಸಿಗಳು ಕಾಡಿನಲ್ಲೇ ಉಳಿಯಬೇಕು ಎಂಬುದು ಬಿಜೆಪಿ ಉದ್ದೇಶ. ಆದರೆ ಆದಿವಾಸಿಗಳು, ದಲಿತರು ಹಾಗೂ ಹಿಂದುಳಿದ ವರ್ಗದವರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪಾತ್ರ ವಹಿಸಬೇಕು ಎಂದು ಕಾಂಗ್ರೆಸ್ ಬಯಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

Tags :