ಅಯೋಧ್ಯೆ ಬಾಲರಾಮನಿಗೆ ಪಲ್ಲಕ್ಕಿ ಉತ್ಸವ
07:32 PM Jan 26, 2024 IST | Samyukta Karnataka
ಮಂಡಲೋತ್ಸವ ಸಂಭ್ರಮದಲ್ಲಿರುವ ಅಯೋಧ್ಯೆ ಶ್ರೀಬಾಲರನಿಗೆ ಶುಕ್ರವಾರ ಸಂಜೆ ಪಲ್ಲಕಿ ಉತ್ಸವ ನಡೆಯಿತು.
ದೇವಳದ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಶ್ರೀಬಾಲರಾಮನ ಉತ್ಸವಮೂರ್ತಿಯನ್ನು ವಾದ್ಯಘೋಷ, ವೇದಘೋಷ, ವಿಷ್ಣುಸಹಸ್ರನಾಮ, ಭಜನೆಯೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆರವರಣದ ಸುತ್ತ ಒಂದು ಉತ್ಸವ ಮಾಡಲಾಯಿತು.
ಬಳಿಕ ಯಾಗಶಾಲೆಯಲ್ಲಿ ಅಷ್ಟಾವಧಾನ ಸೇವೆ ನಡೆಸಲಾಯಿತು.