ಆರ್‌ಬಿಐ ಡೆಪ್ಯುಟಿ ಗವರ್ನರ್ ರಾಜೇಶ್ವರ್ ರಾವ್ ಅವಧಿ ಒಂದು ವರ್ಷ ವಿಸ್ತರಣೆ
03:43 PM Oct 05, 2024 IST
|
Samyukta Karnataka
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪ ಗವರ್ನರ್ ಎಂ. ರಾಜೇಶ್ವರ ರಾವ್ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರ ಒಂದು ವರ್ಷ ವಿಸ್ತರಿಸಿ ಆದೇಶಿಸಿದೆ.
2016ರಲ್ಲಿ ರಾಜೇಶ್ವರ ರಾವ್ ಅವರು ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಬಡ್ತಿ ಹೊಂದಿದ್ದರು. 2020ರಲ್ಲಿ ಆರ್‌ಬಿಐನ ಉಪ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟದ ನೇಮಕಾತಿ ಸಮಿತಿಯು (ACC) ರಾಜೇಶ್ವರ ರಾವ್ ಅವರನ್ನು ಒಂದು ವರ್ಷಗಳ ಅವಧಿಗೆ ಮರು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿತು. ಇದು ಅ. 9ರಿಂದ ಕಾರ್ಯರೂಪಕ್ಕೆ ಬರಲಿದೆ.
ಕೊಚ್ಚಿನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವೀಧರರು ಮತ್ತು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಆಗಿರುವ ರಾವ್ ಅವರು 1984 ರಲ್ಲಿ ಕೇಂದ್ರೀಯ ಬ್ಯಾಂಕ್‌ಗೆ ಸೇರಿದರು.
Next Article