For the best experience, open
https://m.samyuktakarnataka.in
on your mobile browser.

ಮಂಡಕ್ಕಿ (ಕಳ್ಳೇಪುರಿ) ಚಿರೋಟಿರವೆ ದೋಸೆ

12:31 AM Aug 13, 2022 IST | Samyukta Karnataka
ಮಂಡಕ್ಕಿ  ಕಳ್ಳೇಪುರಿ  ಚಿರೋಟಿರವೆ ದೋಸೆ

ಬೇಕಾಗುವ ಪದಾರ್ಥಗಳು: ೩ ಬಟ್ಟಲು ಮಂಡಕ್ಕಿ, ಕಾಲು ಕೆಜಿ ಚಿರೋಟಿರವೆ, ೧ ಬಟ್ಟಲು ಮೊಸರು, ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು, ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿದ್ದು, ಜೀರಿಗೆ ೨ ಚಮಚ, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ.
ಮಾಡುವ ವಿಧಾನ: ಮಂಡಕ್ಕಿಯನ್ನು ಹಿಟ್ಟಿನಂತೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಚಿರೋಟಿ ರವೆ ಮೊಸರಿನಲ್ಲಿ ಸ್ವಲ್ಪ ನೀರಿನೊಂದಿಗೆ ದೋಸೆಯ ಹದಕ್ಕೆ ಕಲಿಸಿ. ಮಂಡಕ್ಕಿ ಪುಡಿಯೊಂದಿಗೆ ಕಲಿಸಿದ ಚಿರೋಟಿ ರವೆ ಮಿಕ್ಸಿಗೆ ಹಾಕಿ. ಈ ಹಿಟ್ಟಿಗೆ ಎಣ್ಣೆ, ಜೀರಿಗೆ, ಹಸಿಮೆಣಸಿನಕಾಯಿ ಕರಿಬೇವು, ಕೊತ್ತಂಬರಿ ಸೇರಿಸಿ ಒಗ್ಗರಣೆ ಮಾಡಿ. ಉಪ್ಪು ಬೆರಸಿ ೧೫ ನಿಮಿಷದ ನಂತರ ದೋಸೆ ಮಾಡಿದರೆ ರುಚಿಯಾದ ದೋಸೆ ತಯಾರು.

- ಗಿರಿಜಾ ಎಸ್. ದೇಶಪಾಂಡೆ, ಬೆಂಗಳೂರು

ಚಿರೋಟಿರವೆ ದೋಸೆ