ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಂಡಿಯಾ ಕೂಟದಲ್ಲಿ ವರ್ಷಕ್ಕೊಬ್ಬ ಪಿಎಂ

10:44 PM Apr 24, 2024 IST | Samyukta Karnataka

ಬೇತುಲ್/ಸುರ್ಗುಜ: ಪ್ರತಿಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದರ ಕುರಿತು ಒಮ್ಮತ ಮೂಡದಿರುವ ಕಾರಣ, ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದಲ್ಲಿ ಒಂದೊಂದು ವರ್ಷ ಒಬ್ಬೊಬ್ಬ ಪ್ರಧಾನಿಯನ್ನು ಮಾಡುವ ಸೂತ್ರವನ್ನು ಪರಿಗಣಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಮಧ್ಯಪ್ರದೇಶದ ಬೇತುಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು, ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಮಾತಾಡುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ ೧೦೦ ದಿನಗಳಲ್ಲಿ ಏನೇನು ಮಾಡಬೇಕು ಎಂದು ಚರ್ಚೆಯಾಗುತ್ತಿದೆ. ಆದರೆ ಪ್ರತಿಪಕ್ಷಗಳು ಪ್ರಧಾನಿ ಯಾರು ಎನ್ನುವ ಗೊಂದಲದಲ್ಲಿದ್ದಾರೆ. ಐದು ವರ್ಷಗಳಲ್ಲಿ ಐವರು ಪ್ರಧಾನಿಯಾದರೆ ದೇಶದ ಪರಿಸ್ಥಿತಿ ಏನಾಗಬಹುದು ಯೋಚಿಸಿ ಎಂದರು.
ಬಿಜೆಪಿ ಸರ್ಕಾರ ೧೦ ವರ್ಷಗಳಲ್ಲಿ ಏನೇನು ಸಾಧನೆ ಮಾಡಿತ್ತು ಎನ್ನುವುದರ ವರದಿಯ ದಾಖಲೆ ಇದೆ. ಆದರೆ ಅವರು ಅಧಿಕಾರಕ್ಕೆ ಬಂದಲ್ಲಿ ಪ್ರಧಾನಿ ಕುರ್ಚಿಯಲ್ಲಿ ಒಬ್ಬರ ಅವಧಿ ಮುಗಿಯುವುದನ್ನೇ ಇನ್ನೊಬ್ಬರು ಕಾಯಬೇಕಾಗುತ್ತದೆ. ಜನ ಅವರನ್ನು ಗೆಲ್ಲಿಸುತ್ತಾರೆ ಎನ್ನುವುದು ಹಗಲುಗನಸು ಎಂದು ಛೇಡಿಸಿದರು.
ಏಪ್ರಿಲ್ ೨೬ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಮುಕ್ತಾಯಗೊಂಡಿತು. ಕಡೇ ದಿನದ ಭಾಷಣದಲ್ಲಿ ಪ್ರತಿಪಕ್ಷಗಳಲ್ಲಿ ಮೂಡಿರುವ ಪ್ರಧಾನಿ ಆಭ್ಯರ್ಥಿಯ ಕುರಿತಾದ ಗೊಂದಲವನ್ನು ರಸವತ್ತಾಗಿ ನಿರೂಪಿಸಿದರು.
ಕೆಲವು ದಿನಗಳಿಂದ ಮೋದಿ ಪ್ರಸ್ತಾವ ಮಾಡುತ್ತಿರುವ ಪ್ರತಿಪಕ್ಷಗಳ ಆಸ್ತಿ ಹಂಚಿಕೆ ಕುರಿತು ಗುರುವಾರ ಮತ್ತೆ ಉಲ್ಲೇಖಿಸಿದರು.
ಸಂವಿಧಾನವನ್ನು ಬರೆದ ಬಾಬಾಸಾಹೇಬ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿಗೆ ವಿರುದ್ಧವಾಗಿದ್ದರು. ಧರ್ಮಾಧಾರಿತ ಮೀಸಲಾತಿ ಇರಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ಆದರೆ ಕಾಂಗ್ರೆಸ್ ಯಾವಾಗಲೂ ತಮ್ಮ ಮತಬ್ಯಾಂಕ್‌ಗೆ ಮೀಸಲಾತಿ ಕೋಟಾ ನೀಡಲು ಚಿಂತಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಓಬಿಸಿ ಕೋಟಾದಿಂದ ಮೀಸಲಾತಿ ಕದಿಯಲು ಯತ್ನಿಸಿದರು. ಇನ್ನೂ ಆ ಪ್ರಯತ್ನ ನಡೆಯುತ್ತಿದೆ ಎಂದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿಯೂ ಧರ್ಮಾಧಾರಿತ ಮೀಸಲಾತಿ ಪ್ರಸ್ತಾವಿಸಿದೆ. ತಮ್ಮ ಮತಬ್ಯಾಂಕ್ ಅನ್ನು ತೃಪ್ತಿ ಪಡಿಸಲು ಈ ಪಕ್ಷ ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಟೀಕಸಿದರು.

Next Article