ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಂದಿನದು ಇಂದಿಗೆ-ಈಗಲೇ…

04:00 AM Oct 25, 2024 IST | Samyukta Karnataka

ಬಹಳಷ್ಟು ಜನರು ಗತವೈಭವದ ಕಳೆದ ದಿನಗಳನ್ನು ನೆನಪಿಸಿಕೊಂಡು ಸಂತೋಷಪಡುತ್ತಾರೆ. ನಾಳಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗುತ್ತಾರೆ. ನಾಳೆ ಹೇಗಪ್ಪಾ ಎಂಬ ಭಯ ಕಾಡುತ್ತಿರುತ್ತದೆ. ಇವೆರಡರ ನಡುವಿನ ಇಂದಿನ ದಿನವನ್ನು ಮರೆತು ಬಿಡುತ್ತಾರೆ. ಇಂದಿನ ದಿನವನ್ನು ಇಂದಿಗೆ ಈಗಲೇ ಅನುಭವಿಸುವುದನ್ನು ದಾರ್ಶನಿಕರು ಹೇಳುತ್ತ, ಸಂತೋಷದ ಶಬ್ದಕೋಶದಲ್ಲಿ ಮೊದಲನೆಯ ಶಬ್ದ ಇಂದು ಇಂದಿನ ದಿನವನ್ನು' ಹುಡುಕಿರಿ ಎಂಬ ಉಪದೇಶವನ್ನು ಮಾಡಿದ್ದಾರೆ. ಕಳೆದು ಹೋದ ದಿನಗಳನ್ನು ನೆನಪಿಸುತ್ತ ಕಾಲ ಕಳೆದರೆ ಅದು ಬುದ್ಧಿವಂತಿಕೆ ಅಲ್ಲ. ಅದು ನಮ್ಮ ಇಂದಿನ ಈಗಿನ ಸಂತೋಷಕ್ಕೆ ಕಡಿವಾಣ ಹಾಕುತ್ತದೆ. ಖ್ಯಾತ ಇಸ್ಲಾಮಿಯ ದಾರ್ಶನಿಕ ಐದ ಇಬ್ನ ಅಬ್ಬದುಲ್ಲಾ ತಮ್ಮ ಪ್ರಸಿದ್ಧ ಗ್ರಂಥದುಃಖಿಸಬೇಡ' (ಪುಟ್ಟ ೩೦ )ದಲ್ಲಿ ಮರಳಿಬಾರದವುಗಳನ್ನು ಉಲ್ಲೇಖಿಸಿದ್ದಾರೆ. ನೀವು ಉದಯಿಸಿದ ಸೂರ್ಯನನ್ನು ಮರಳಿ ಅದೇ ಸ್ಥಾನಕ್ಕೆ ತರಬಲ್ಲಿರಾ, ಮಗುವನ್ನು ತಾಯಿಯ ಗರ್ಭದಲ್ಲಿ ಮತ್ತೆ ಇರಿಸಲು ಸಾಧ್ಯವೇ, ಅಷ್ಟೇ ಅಲ್ಲ ಹರಿದು ಹೋದ ಕಂಬನಿಗಳನ್ನು ಮತ್ತೆ ಕಣ್ಣುಗಳಲ್ಲಿ ತುಂಬಲು ಸಾಧ್ಯವೇ.? ಎಂದು ಪ್ರಶ್ನಿಸಿ ಗತಿಸಿದುದನ್ನು ಮತ್ತೆ ಮರಳಿ ತರಲು ಸಾಧ್ಯವಿಲ್ಲ ಎಂದಿದ್ದಾರೆ.
ಕುರಾನಿನ ಅಧ್ಯಾಯ ಅಲ್ ಬಕರ್ (೨.೧೩೪) ವಚನದಲ್ಲಿ ಅದು ಗತಿಸಿ ಹೋದ ಸಮುದಾಯ ಅವರು ಸಂಪಾದಿಸಿದ್ದು ಅವರಿಗೆ ನೀವು ಸಂಪಾದಿಸಿದ್ದು ನಿಮಗೆ ಅವರು ಮಾಡಿದ ಕರ್ಮಗಳಿಗಾಗಿ ನಿಮ್ಮನ್ನು ಪ್ರಶ್ನಿಸುವುದಿಲ್ಲ' ಎಂದು ಹೇಳಲಾಗಿದೆ. ನಾಳೆ ಇರುವುದೇ ಇಲ್ಲ. ಅದರ ಹುಟ್ಟು ನೈಜತೆ ಇಲ್ಲ. ಜನರು ನಾಳಿನ ಬಡತನ ಹಸಿವು, ರೋಗ ರುಜಿನ ಹಾಗೂ ದುರಂತಗಳಿಂದ ಭಯಭೀತರಾಗಿರುತ್ತಾರೆ. ಈಗಲೇ ಪಡೆದುದರ ಕಡೆಗೂ ಗಮನಹರಿಸಿರಿ. ಕುರಾನಿನ ಇನ್ನೊಂದು ಅಧ್ಯಾಯ ಅತ್ ರಾಫ (೭.೧೪೪) ವಚನದಲ್ಲಿ ದೇವರುನೀವು ಈಗ ನಾನು ನೀಡುವುದನ್ನು ಸ್ವೀಕರಿಸಿ ಕೃತಜ್ಞರಾಗಿರಿ.' ಎಂದು ಆದೇಶ ನೀಡಿದ್ದಾನೆ.
ಐದ ಇಬ್ನ ಅವರ ದುಃಖಿಸಬೇಡ ಎಂಬ ಗ್ರಂಥದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕುರಾನಿನ ಬೆಳಕಿನಲ್ಲಿ ನೀಡಿದ್ದನ್ನು ಗಮನಿಸಬಹುದು. ಇಂದು ದೇವರು ನೀಡಿದ ದಿನವನ್ನು ಹೇಗೆ ನಮ್ಮದನ್ನಾಗಿ ಮಾಡಿಕೊಳ್ಳಬೇಕೆಂದು ಹೇಳುತ್ತಾನೆ..

Next Article