ಇಡಿ ಅಧಿಕಾರಿಗಳಿಂದ ಕುಮಾರರ ವಿಚಾರಣೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಸಿ.ಟಿ.ಕುಮಾರ್ ಹಾಗೂ ಸಂಸದ ಕುಮಾರ್ ನಾಯಕ್ ಅವರನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದ್ದಾರೆ.
ಮುಡಾ ಪಕರಣಕ್ಕೆ ಸಂಬಂಧಿಸಿದಂತೆ 50:50 ಅನುಪಾತದ ಬದಲಿ ನಿವೇಶನಗಳಲ್ಲಿ ಪಾರ್ವತಿ ಸಿದ್ದರಾಮಯ್ಯನವರಿಗೆ ಸೇರಿದೆ ಎನ್ನಲಾದ 14 ನಿವೇಶನಗಳಿಗೆ ಕುಮಾರ್ ಸಹಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸಿ.ಟಿ.ಕುಮಾರ್ ಅವರು, ಸಿಎಂ ಸಿದ್ದರಾಮಯ್ಯ ಅವರ ಖಾಸಗಿ ಆಪ್ತ ಸಹಾಯಕರಾಗಿದ್ದು, ಸ್ಥಳೀಯ ಕಾರ್ಯಕ್ರಮ ಹಾಗೂ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. 2014ರಿಂದಲೂ ಕೇಸ್ ಫಾಲೋಅಪ್ ಮಾಡುತ್ತಿದ್ದ ಇವರು, ಪಾರ್ವತಿ ಸಿದ್ದರಾಮಯ್ಯರ ಪರವಾಗಿ ಪ್ರತಿಯೊಂದು ಮಟ್ಟದಲ್ಲೂ ಅರ್ಜಿ ವಿಲೇವಾರಿ ಮಾಡಿದ್ದರು. ಬಳಿಕ ಅರ್ಜಿ ಹಾಕಿ ಪಾರ್ವತಿ ಸಿದ್ದರಾಮಯ್ಯ ಹೆಸರಿಗೆ ನಿವೇಶನ ಮಂಜೂರಾಗುವಂತೆ ಮಾಡಿದ್ದರು. ಇನ್ನು ಸಂಸದ ಕುಮಾರ್ ನಾಯಕ್ ಅವರು ಭೂ ಪರಿವರ್ತನೆ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಈ ಬಗ್ಗೆ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.