ಇಡಿ ಎಂಬುದು ಸೀಳು ನಾಯಿ
ಗದಗ: ಮುಡಾ ಹಗರಣ ವಿಚಾರದಲ್ಲಿ ಇಡಿ ಎಂಬ ಸೀಳು ನಾಯಿಯನ್ನು ನಮ್ಮ ಮೇಲೆ ಬಿಟ್ಟಿದ್ದಾರೆ. ಇದು ಕೇಂದ್ರ ಸರಕಾರ ವಿರೋಧಿಗಳನ್ನು ಹಣಿಯಲು ನಡೆಸುತ್ತಿರುವ ಪೊಲಿಟಿಕಲ್ ಅಟ್ಯಾಕ್ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದರು.
ತೋಂಟದಾರ್ಯ ಶಿವಾನುಭವ ಮಂಟಪದಲ್ಲಿ ನಡೆದ ರಾಜಕೀಯ ಸಂತ ಡಿ.ಆರ್ ಪಾಟೀಲ ಗ್ರಂಥ ಬಿಡುಗಡೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಡಿ ಎಂಬುದು ಜಾರಿ ನಿರ್ದೇಶನಾಲಯ ಅಲ್ಲ. ಅದು ರಾಜಕೀಯವಾಗಿ ವಿಚ್ ಹಂಟಿಂಗ್ ಏಜೆನ್ಸಿಯಾಗಿ ಪರಿವರ್ತನೆಗೊಂಡಿದೆ. ದೇಶದಲ್ಲಿ ಇಲ್ಲಿಯವರೆಗೆ ಬರೀ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಬ್ಲ್ಯಾಕ್ ಮನಿ ಕೇಸ್ ಹಾಕಿದ್ದಾರಾ.? ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟವ್ರ ಮೇಲೆ ಕೇಸ್ ಹಾಕಿದ್ದಾರಾ ಎಂದು ಪ್ರಶ್ನಿಸಿ, ಇಡಿ ಬಿಜೆಪಿ ಅಂಗಸಂಸ್ಥೆಯಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ಇಡಿ ಎಷ್ಟು ಕೇಸ್ ಹಾಕಿದೆಯೋ ಅದರಲ್ಲಿ ೯೦ರಷ್ಟು ವಿರೋಧ ಪಕ್ಷಗಳ ಮೇಲೆ ಹಾಕಿದ್ದಾರೆ. ಹಾಕಿರೋ ಕೇಸ್‌ನಲ್ಲಿ ಶೇಕಡಾ ೧.೫ರಷ್ಟು ಮಾತ್ರ ಶಿಕ್ಷೆಯಾಗಿದೆ. ಶೇ. ೯೯ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಪ್ರಕರಣ ದಾಖಲಾಗಿಸಿಲ್ಲ. ಇಡಿ ಕೆಲಸ ಬರೀ ರಾಜಕೀಯ ವಿರೋಧಿಗಳಿಗೆ ಹಿಟ್ ಆ್ಯಂಡ್ ರನ್ ಮಾಡೋದಾಗಿದೆ ಎಂದು ಲೇವಡಿ ಮಾಡಿದರು.