ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಉತ್ತಮರು ಭಗವಂತನ ಗುಣಗಳನ್ನು ಕೊಂಡಾಡುತ್ತಾರೆ

04:14 AM Oct 23, 2024 IST | Samyukta Karnataka

ಮಹಾತ್ಮರು, ಜ್ಞಾನಿಗಳು ಮಹಾನುಭಾವರು, ರಮಾ ಬ್ರಹ್ಮಾದಿ ದೇವತೆಗಳ ಆ ಭಗವಂತನ ಗುಣಗಳನ್ನು ಕೊಂಡಾಡುತ್ತಾರೆ.
ನಿರಂತರ ಭಗವಂತನಿಂದ ಉಪದೇಶವನ್ನು ಪಡೆಯುತ್ತಾ ತಾವು ಇತರರಿಗೆ ಭಗವಂತನ ಬಗ್ಗೆ ಉಪದೇಶವನ್ನು ಕೊಡುತ್ತಿರುವ ಮಹಾನುಭಾವದವರಿಗೆ ಅದೆಷ್ಟು ವೈರಾಗ್ಯ ಬಂದಿರಲಿಕ್ಕಿಲ್ಲ. ಆದರೂ ಅವರಿಗೂ ವೈರಾಗ್ಯ ಬಂದಿಲ್ಲ ನಿತ್ಯದಲ್ಲಿ ಭಗವಂತನ ಕೀರ್ತನಗಳನ್ನು ಮಾಡುತ್ತಾ ಇರುತ್ತಾರೆ. ಆ ಭಗವಂತನ ಗುಣಗಳ ಅನುವಾದ ಉಂಟಲ್ಲ ಅದು ಹೇಗೆ ಇದೆ ಎಂದರೆ ಅದು ಉತ್ತಮ: ತಮ್ಮ ಅಂದ್ರೆ ಅಜ್ಞಾನ. ನಮ್ಮೆಲ್ಲರ ಇದು ಬಗ್ಗೆ ಕಾರಣವಾದದ್ದು ಅಜ್ಞಾನ. ಸಂಸಾರಕ್ಕೆ ಮೂಲ ಕಾರಣವಾದದ್ದು ಭಗವಂತನ ಅಜ್ಞಾನ, ಅಜ್ಞಾನ ಇರೋವರಗೂ ಸಂಸಾರ/ದುಃಖ ನಮಗೆ ತಪ್ಪುವುದಿಲ್ಲ. ಅಂತಹ ಸಂಸಾರಕ್ಕೆ ಮೂಲ ಕಾರಣವಾದ ಅಜ್ಞಾನವನ್ನೇ ಕಿತ್ತೆಸೆಯುವ ಸಾಮರ್ಥ್ಯ ಈ ಭಗವಂತನ ಗುಣಾನುವಾದಕ್ಕೆ ಇದೆ. ಹೀಗಿರುವಾಗ ಅಂತಹ ಭಗವಂತನ ಗುಣಗಳ ಅನುವಾದಗಳನ್ನು ನಾನು ಮಾಡದೆ, ಅಥವಾ ನೀವು ಮಾಡುವಾಗ ವಿರಕ್ತಿಯಿಂದ ಇರದೆ ಕೇಳದೆ ಇರುವುದಕ್ಕೆ ಹೇಗೆ ಸಾಧ್ಯ.
ಇದರಿಂದ ದೊಡ್ಡ ಲಾಭವಿದೆ.
ಸಂಸಾರದವೆಂಬ ದೊಡ್ಡ ರೋಗಕ್ಕೆ ತುತ್ತಾದ ನಾವು ಆ ರೋಗವನ್ನು ಕಳೆಯುವ ಅದಕ್ಕೆ ಮೂಲ ಕಾರಣವಾದ ಅಜ್ಞಾನವನ್ನೇ ಕಿತ್ತೆಸೆಯುವ ಉತ್ತಮ. ಆ ತಮಸ್ಸೇ ಭಗವಂತನ ಕಥೆಗಳ ವರ್ಣನೆಯಿಂದ ದೂರವಾಗುತ್ತದೆ ಅಜ್ಞಾನ ದೂರವಾಗುತ್ತದೆ ಸಂಸಾರ ಕಳೆದು ಹೋಗುತ್ತೆ ಅಂತಹ ಭಗವಂತನ ಗುಣಾನುವಾದ ಮಾಡುವಾಗ ನಾವು ಅದರಿಂದ ವಿರಕ್ತನಾಗಿ ಬೇಡ ಎಂದು ಎದ್ದು ಹೋಗಲು ಹೇಗೆ ಸಾಧ್ಯವಾಗುತ್ತದೆ.
ಇನ್ನಷ್ಟು ಹೇಳಿ ಮತ್ತಷ್ಟು ಕೇಳಿ ಸಂಸಾರದ ತಮವನ್ನು ಕಳೆದುಕೊಳ್ಳೋಣ. ಪರೀಕ್ಷಿತ್ ಮಹಾರಾಜರಿಗೆ ಪುನರ್ಜನ್ಮ ಇಲ್ಲ, ಮೋಕ್ಷವಾಗುತ್ತದೆ ಎಂದು ನಿಶ್ಚಯವಾಗುತ್ತದೆ ಅಂತಹ ವ್ಯಕ್ತಿ ಸಂಸಾರವನ್ನು ಕಳೆಯುವುದಕ್ಕೆ ಇನ್ನೇನು ಹೊಸದಾಗಿ ಪರಮಾತ್ಮನ ಕಥೆ ಕೇಳುವುದಿದೆ? ಅಪರೋಕ್ಷ ಜ್ಞಾನವಾಗಿದ್ದರೂ ಇನ್ನೂ ವಿಶೇಷವಾಗಿ ಜ್ಞಾನವಾಗಬೇಕು ಎಂದು ಶ್ರವಣ ಮಾಡುತ್ತಿದ್ದಾನೆ.
ನಾವು ಸಂಸಾರದಲ್ಲಿ ಇದ್ದವರು ಇನ್ನು ಎಷ್ಟೋ ಜನ್ಮ ಎತ್ತಬೇಕಾಗಿದೆ ಇನ್ನು ಎಷ್ಟೋ ಕಷ್ಟ ಕಾರ್ಪಣ್ಯಗಳನ್ನು ಕಳೆಯಬೇಕಾಗಿದೆ, ಇಂಥ ಭಯಾನಕವಾಗಿರುವ ಸಂಸಾರದ ಸಾಗರ ಕಾಣುತ್ತಿರುವಾಗ ಆ ಸಂಸಾರ ಸಾಗರವನ್ನು ದಾಟಲು ಯಾರಾದರೂ ಮಹಾತ್ಮರು ಭಗವಂತನ ಗುಣಾನುವಾದವನ್ನು ಮಾಡುತ್ತಿದ್ದರೆ ಭಕ್ತಿಯಿಂದ ಪುಣ್ಯಶ್ರಮಣಗಳನ್ನು ಮಾಡಬೇಕು ಪರಮಾತ್ಮ ಉತ್ತಮ ಶ್ಲೋಕವಂತೆ ಶ್ರೀಮದಾಚಾರ್ಯರು ಹೇಳುತ್ತಾರೆ. ತಾನೇ ತನ್ನ ಜ್ಞಾನವನ್ನು ಕೊಟ್ಟು ಮೋಕ್ಷದಲ್ಲಿ ಆನಂದ ಕೊಡುತ್ತಾನೆ. ಯಾವ ಪರಮಾತ್ಮನಿಂದ ಸಕಲ ಸಜ್ಜನರಿಗೆ ಉತ್ತಮರಿಗೆ ಜ್ಞಾನಾನಂದ ಪ್ರಾಪ್ತಿಯಾಗುತ್ತದೂ ಅಂತಹ ಪರಮಾತ್ಮನ ಗುಣ ಅನುವಾದಗಳನ್ನು ನಾವು ಕೇಳಬೇಕು.

Next Article