ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
ಆರ್ ಎಸ್ ಹಿರೇಮಠ
ಕುಳಗೇರಿ ಕ್ರಾಸ್: ರೈತರು ತಮ್ಮ ಜಮಿನಿನಲ್ಲಿ ಬೆಳೆದ ಉತ್ತಮ ಬೆಳೆಗಳಿಗೆ ಯಾರದೂ ದೃಷ್ಟಿ ಬಿಳಬಾರದೆಂದು ಬೆದರು ಗೊಂಬೆ ತಯಾರಿಸಿ ನಿಲ್ಲಿಸುತ್ತಾರೆ. ಮತ್ತೆ ಏನೆಲ್ಲ ಕಸರತ್ತು ನಡೆಸಿ ತಮ್ಮ ಬೆಳೆಗಳನ್ನ ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಉತ್ತಮ ಬೆಳೆಗಳು ಒಣಗುತ್ತಿರುವುದನ್ನ(ಸಿಡಿರೋಗ) ಗಮನಿಸಿ ಮಮಟಗೇರಿ ರೈತನೊಬ್ಬ ತನ್ನ ಬೆಳೆಗೆ ಜನರ ದೃಷ್ಟಿ ಬಿಳಬಾರದೆಂದು ಸಿನಿ ತಾರೆಯರ ಭಾವಚಿತ್ರಗಳ ಕಟೌಟ್ ನಿಲ್ಲಿಸಿದ್ದಾರೆ.
ಮಮಟಗೇರಿ ಗ್ರಾಮದ ರೈತ ಮಹಾಂತೇಶ ತಿಮ್ಮನಾಯ್ಕರ್ ತಮ್ಮ ಎರೆಡು ಏಕರೆ ಜಮೀನಿನಲ್ಲಿ ಬದನೆಕಾಯಿ, ಮೆನಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನ ಬೆಳೆದಿದ್ದಾರೆ. ಉತ್ತಮ ಬೆಳೆಗೆ ಸಿಡಿರೋಗ ಬಂದು ನಾಟಿ ಮಾಡಿದ ಗಿಡಗಳು ಒಂದೊಂದಾಗಿ ಒಣಗುತ್ತಿದ್ದವಂತೆ. ತಮ್ಮ ಬೆಳೆಗೆ ಜನರ ದೃಷ್ಟಿ ಬಿಳ್ಳುತ್ತಿದೆ ಎಂದರಿತ ರೈತ ಮಹಾಂತೇಶ ಬೆಳೆಗಳ ಮದ್ಯೆ ನಟಿಯರ ಪ್ಲೆಕ್ಸ್ ಪ್ರಯೋಗಿಸಿದ್ದಾರಂತೆ. ಕನ್ನಡದ ಖ್ಯಾತ ಸಿನಿಮಾ ನಟಿಯರಾದ ಅಮೂಲ್ಯ ರಚಿತಾರಾಮ್ ಹಾಗೂ ರಾಧಿಕಾ ಪಂಡಿತ್ ಅವರ ಭವಚಿತ್ರಗಳನ್ನ ತಮ್ಮ ಜಮಿನಿನಲ್ಲಿ ನಿಲ್ಲಿಸಿದ್ದಾರೆ. ಹೆದ್ದಾರಿ ಮೇಲೆ ಸಂಚರಿಸುವ ಜನ ಹೀಗೆಕೆ ಚಿತ್ರನಟಿಯರ ಭಾವಚಿತ್ರ ಅಚಿಟಿಸಿದ್ದಾರೆ ಎಂದು ಅಚ್ಚರಿಗೊಳ್ಳುತ್ತಿದ್ದಾರೆ. ಸ್ವಲ್ಪಹೊತ್ತು ನಿಂತು ಮುಂದೆ ಸಾಗುತ್ತಿದ್ದಾರೆ.
ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಜಮಿನು ಇರುವುದರಿಂದ ಮೇಲಿಂದಮೇಲೆ ಜನರ ದೃಷ್ಟಿ ಬೆಳೆಯ ಮೇಲೆ ಬಿಳ್ಳುತ್ತಿತ್ತು. ಈಗ ಜನರ ದೃಷ್ಟಿ ನೇರವಾಗಿ ಅಮೂಲ್ಯ, ರಾಧಿಕಾ, ರಚಿತಾರಾಮ್ ಅವರ ಚಿತ್ರದ ಕಡೆಗೆ ಹೋಗುತ್ತಿದ್ದು ನಮ್ಮ ಬೆಳೆಗೆ ರಕ್ಷಣೆ ಸಿಕ್ಕಂತಾಗಿದೆ. ಸದ್ಯ ಉತ್ತಮ ಲಾಭದ ಜೊತೆಗೆ ಇಳುವರಿ ಸಹ ಕೊಡುತ್ತಿದೆ ಎನ್ನುತ್ತಾರೆ ರೈತ ಮಹಾಂತೇಶ.
ರೈತರು ತಮ್ಮ ಬೆಳೆ ರಕ್ಷಣೆಗಾಗಿ ಬೇರೆ-ಬೇರೆ ಪ್ರಯೋಗ ಮಾಡಿ ತಮ್ಮ ಬೆಳೆಗಳನ್ನ ರಕ್ಷಿಸಿದರೆ. ಇತ್ತ ಮಮಟಗೇರಿ ಗ್ರಾಮದ ಮಹಾಂತೇಶ ಸಿನಿಮಾ ತಾರೆಯರಿಗೆ ಮೊರೆಹೋಗಿದ್ದು ನಿಜಕ್ಕೂ ಅಚ್ಚರಿ ತರುವಂತಹದ್ದು.