ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಉಪಯೋಗಕ್ಕೆ ಬಾರದ ಪೈಪುಗಳಿಂದ ಗಣೇಶ ಮೂರ್ತಿ

09:45 AM Sep 07, 2024 IST | Samyukta Karnataka

ಇಳಕಲ್ : ಕಳೆದ ೩೩ ವರ್ಷಗಳಿಂದ ಉಪಯೋಗಕ್ಕೆ ಬಾರದ ವಸ್ತುಗಳಿಂದ ಗಣೇಶ ಮೂರ್ತಿ ಸಿದ್ದಪಡಿಸುವ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಈ ಬಾರಿ ನಿಷ್ಪ್ರಯೋಜಕ ಪೈಪುಗಳ ಗಣೇಶ ಮೂರ್ತಿ ನಿರ್ಮಿಸಿದೆ.
ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ರಾಜ್ಯ ಮಟ್ಟದ ಸುದ್ದಿ ಮಾಡುತ್ತಿದ್ದ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯ ಬಸವರಾಜ ಗವಿಮಠ ಅವರ ಮೂಸೆಯಲ್ಲಿ ಮೂಡಿ ಬಂದ ಈ ಗಣೇಶ ಮೂರ್ತಿ ಜನರನ್ನು ಆಕರ್ಷಿಸುತ್ತದೆ.
ಈಗಾಗಲೇ ಬೇರೆಬೇರೆ ನಿಷ್ಪ್ರಯೋಜಕ ವಸ್ತುಗಳ ಗಣೇಶ ಮೂರ್ತಿ ನಿರ್ಮಿಸಿ ಅವುಗಳ ಮೂಲಕ ಜಾಗೃತಿ ಕೆಲಸ ಮಾಡಿದ ಸಾಧನೆ ಬಸವರಾಜ ಗವಿಮಠ ಮತ್ತು ಅವರ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸಲ್ಲುತ್ತಿದ್ದು ಈ ಸಲದ ಪೈಪುಗಳ ಗಣೇಶ ಸಹ ಜನಮೆಚ್ಚುಗೆ ಪಡೆಯುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

Next Article