ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಎಂಎಸ್‌ಎಂಇಗೆ ಬಲ: ಮುದ್ರಾ ಸಾಲ ೨೦ ಲಕ್ಷಕ್ಕೆ ಏರಿಕೆ

12:56 AM Jul 24, 2024 IST | Samyukta Karnataka

ಪ್ರಸಕ್ತ ಕೇಂದ್ರ ಬಜೆಟ್ ಎಂಎಸ್‌ಎಂಇ(ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ವಲಯಕ್ಕೆ ಪ್ರಧಾನ ಒತ್ತು ನೀಡಿದೆ. ಎಂಎಸ್‌ಎಂಇಗಳ ಉತ್ತೇಜನಕ್ಕೆ ಒತ್ತು ನೀಡಿದರೆ ದೇಶದ ಆರ್ಥಿಕತೆಗೆ ಉದ್ದೇಶಿತ ಗತಿ-ಶಕ್ತಿಗಳು ಬರಲಿವೆ ಎಂಬುದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಒಟ್ಟು ಸಾರವಾಗಿತ್ತು.
ಎಂಎಸ್‌ಎಂಇಗಳಿಗೆ ಉತ್ತೇಜನ ನೀಡುವ ಮೊದಲ ಹೆಜ್ಜೆಯಾಗಿ ಮಹಿಳೆಯರು ಸ್ವಾವಲಂಬಿಗಳಾಗಲು ಇದುವರೆಗೆ ನೀಡುತ್ತಿದ್ದ ಮುದ್ರಾ' ಸಾಲದ ಪ್ರಮಾಣವನ್ನು ದ್ವಿಗುಣಗೊಳಿಸಲಾಗಿದೆ. ಇನ್ನು ಮುಂದೆ ಈ ಯೋಜನೆಯಡಿ ಮಹಿಳೆಯರಿಗೆ ೨೦ ಲಕ್ಷ ರೂಪಾಯಿ ಸಾಲ ದೊರೆಯಲಿದ್ದು, ಇಲ್ಲಿಯತನಕ ೧೦ ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಎಂಎಸ್‌ಎಂಇಗಳು ತಮ್ಮ ಘಟಕಕ್ಕೆ ಹೊಸ ಉಪಕರಣ ಖರೀದಿಸಲು ಯಾವುದೇ ಭದ್ರತೆ ಇಲ್ಲದೇ ಸಾಲ ನೀಡುವುದು ಇನ್ನೊಂದು ಅತೀ ಮಹತ್ವದ ಘೋಷಣೆಯಾಗಿದೆ. ಎಂಎಸ್‌ಎಂಇ ಘಟಕಗಳನ್ನು ಸ್ಥಾಪಿಸುವವರು ಯಂತ್ರೋಪಕರಣಗಳ ಸಾಲ ಪಡೆಯಲು ಇನ್ನು ತಮ್ಮ ಕಂಪನಿಯನ್ನಾಗಲೀ ಅಥವಾ ಬೇರೆ ಆಸ್ತಿಯನ್ನಾಗಲೀ ಅಡಮಾನ ಮಾಡಬೇಕಾಗಿಲ್ಲ. ಜೊತೆಗೆ ಮೂರನೇ ವ್ಯಕ್ತಿಯ ಭದ್ರತೆಯನ್ನು ನೀಡಬೇಕಾಗಿಲ್ಲ. ಕ್ಷೇತ್ರ ವೇಗವಾಗಿ ಬೆಳೆದು ದೇಶದ ಅರ್ಥ ವ್ಯವಸ್ಥೆಯ ಪ್ರಧಾನ ಬೆನ್ನೆಲುಬಾಗಲು ಇದೊಂದು ಕ್ರಾಂತಿಕಾರ ತೀರ್ಮಾನವಾಗಲಿದೆ ಎಂದು ವಿವರಿಸಿದರು. ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮದೇ ಆದ ಆಂತರಿಕ ಆಡಳಿತಾತ್ಮಕ ಪ್ರಕ್ರಿಯೆಗಳ ಮೂಲಕ ಅರ್ಹ ಘಟಕಗಳಿಗೆ ಸಾಲ ನೀಡಲಿವೆ. ಇದುವರೆಗೆ ಹೊರಗಿನ ಏಜೆನ್ಸಿ ವರದಿ ನಂತರ ಸಾಲ ನೀಡಲಾಗುತ್ತಿತ್ತು. ಎಂಎಸ್‌ಎಂಇ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆ ಒದಗಿಸಿಕೊಡುವುದಕ್ಕಾಗಿಇ-ಕಾಮರ್ಸ್ ರಫ್ತು' ಹಬ್‌ಗಳನ್ನು ಕೇಂದ್ರ ನಿರ್ಮಾಣ ಮಾಡಲಿದೆ. ಇದರಿಂದ ಈ ಉದ್ಯಮಗಳು ಮಧ್ಯವರ್ತಿಗಳ ಕಾಟವಿಲ್ಲದೇ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಬಹುದಾಗಿದೆ. ಆಹಾರೋದ್ಯಮ ಕ್ಷೇತ್ರದ ೫೦ ಎಂಎಸ್‌ಎಂಇಗಳಿಗೆ ಇನ್ನು ಮುಂದೆ ಕೇಂದ್ರದಿಂದ ಆರ್ಥಿಕ ನೆರವು ದೊರೆಯಲಿದೆ. ಜೊತೆಗೆ ಗುಣಮಟ್ಟ ಪರೀಕ್ಷೆಗೆ ೧೦೦ ತಪಾಸಣಾ ಪ್ರಯೋಗಾಲಯಗಳ ಸ್ಥಾಪನೆಗೂ ಕೇಂದ್ರ ನೆರವಾಗಲಿದೆ.
ಸಾಲ ವಸೂಲಾತಿ ನ್ಯಾಯಾಧೀಕರಣ: ಕೈಗಾರಿಕಾ ವಲಯದ ಸಾಲ ವಸೂಲಾತಿ ಮತ್ತು ವಿವಾದ ಪರಿಹಾರಗಳಿಗೆ ಹೊಸ ಸಾಲ ವಸೂಲಾತಿ ನ್ಯಾಯಾಧೀಕರಣಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಸಾಲ ವಸೂಲಾತಿಗೆ ವೇಗ ಬರಲಿದೆ ಎಂದರು.

Next Article