ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಏಕಕಾಲಕ್ಕೆ 400 ಭಕ್ತಾಧಿಗಳ ತೀರ್ಥಯಾತ್ರೆಗೆ ಜೋಶಿಯವರ ಶುಭ ಹಾರೈಕೆ

01:58 PM Nov 29, 2023 IST | Samyukta Karnataka

ಹುಬ್ಬಳ್ಳಿ: ‌ ಧಾರವಾಡದ ಶ್ರೀ ಬಸವೇಶ್ವರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 400 ಜನ ಭಕ್ತಾಧಿಗಳು ಕಾಶಿಯಾತ್ರೆಗೆ ಸಂಸದ ಪ್ರಲ್ಹಾದ ಜೋಶಿಯವರ ಬೆಂಬಲಿಗರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಎಲ್ಲಾ 400 ಭಕ್ತರನ್ನು ವಿಶೇಷವಾಗಿ ಸತ್ಕರಿಸಿ, ಸಿಹಿ ನೀಡಿ ಬೀಳ್ಕೊಟ್ಟಿದ್ದಾರೆ.

ಈ ಕುರಿತು ಸಂಸದ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ, ಕಾಶಿ ವಿಶ್ವನಾಥ ಸನ್ನಿಧಾನಕ್ಕೆ‌ ಇಂದು ಧಾರವಾಡದ ಶ್ರೀ ಬಸವೇಶ್ವರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 400 ಜನ ಸದಸ್ಯರು - ಭಕ್ತಾಧಿಗಳು ತೆರಳಿದ್ದು, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಭಕ್ತರನ್ನು ಸತ್ಕರಿಸಿ ಬೀಳ್ಕೊಡಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಚನೆ ದೇಶಾದ್ಯಂತ ಯಾವ ರೀತಿ ಸಂಚಲನ ಸೃಷ್ಟಿಸುತ್ತಿದೆ ಎಂಬುದಕ್ಕೆ ಕಾಶಿ ಕ್ಷೇತ್ರವೇ ಸಾಕ್ಷಿ. ಕಾಶಿಯನ್ನು ಪುನರುತ್ಥಾನ ಮಾಡುವ ಮೂಲಕ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಧಾರವಾಡದಿಂದ ಕಾಶಿಗೆ ಹೊರಟವರಲ್ಲಿ ಹಿರಿಯರು ಮಹಿಳೆಯರು ಅತೀ ಹೆಚ್ಚು ಕಂಡುಬಂದಿದ್ದು ವಿಶೇಷವಾಗಿತ್ತು. ಎಲ್ಲಾ ಭಕ್ತಾದಿಗಳ ಪಯಣ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Next Article