ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಏನ್ ಸ್ಯಾಮಣ್ಣ,,,???

02:30 AM May 11, 2024 IST | Samyukta Karnataka

ಮೊದಲು ಎರಡು ಬ್ಯಾಂಡಿನ ಮರ್ಫಿ ರೇಡಿಯೋ ರಿಪೇರಿ ಮಾಡುತ್ತಿದ್ದ ಸ್ಯಾಮಣ್ಣ ಪತ್ರೋಳಿ ಕಂಪ್ಯೂಟರ್ ಮೇಲೆ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಪರಿಣಿತಿ ಹೊಂದಿ ಹೆಂಗೆಂಗೋ ಮಾಡಿ ಅಮೆರಿಕದಲ್ಲಿ ಇದ್ದ ಸ್ಯಾಮಣ್ಣ ಅದ್ಯಾಕೆ ಹಿಂಗಾಡುತ್ತಾನೋ ಏನೋಪ ಎಂದು ಮ್ಯಾಗಡೆ ಓಣಿ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಸ್ಯಾಮಣ್ಣನ ದೂರದೃಷ್ಟಿ ಭಯಂಕರ ಇತ್ತು. ಆವಾಗ ರೇಡಿಯೋ ರಿಪೇರಿ ಮಾಡುವ ಸಂದರ್ಭದಲ್ಲಿಯೇ ಇದನ್ನು ಹೀಗೆ ಮಾಡಿ ಹಾಗೆ ಮಾಡಿದರೆ ಇನ್ನಷ್ಟು ಸೌಂಡು ಬರುತ್ತದೆ ಎಂದು ಪ್ರಯೋಗ ಮಾಡಿ ತೋರಿಸುತ್ತಿದ್ದ. ಕೊನೆಗೆ ಇರಪಾಪುರ ಮಾದೇವನು ನೀನು ಕಂಪ್ಯೂಟರ್ ಬಗ್ಗೆ ಸ್ವಲ್ಪ ತಿಳಿದುಕೋ ಎಂದು ಹೇಳಿದ್ದ. ಅಂದಿನಿಂದ ಸ್ಯಾಮಣ್ಣ ಕಂಪ್ಯೂಟರ್‌ಗಳ ಬಗ್ಗೆ ತಲೆ ಕೆಡೆಸಿಕೊಂಡು ಅವುಗಳನ್ನು ತಿರುಗಿಸಿ ತಿರುಗಿಸಿ ರಿಪೇರಿ ಮಾಡಿ, ಕಂಪ್ಯೂಟರ್ ಅಂದರೆ ಹೇಗೆ ಏನು ಎಂದು ತಿಳಿದುಕೊಂಡ. ಯಾವುದೋ ದೇಶದಲ್ಲಿ ವಾಸವಾಗಿದ್ದ ಹುಜುರ್ ಚಂದ್ರನಿಗೆ ಇದು ಗೊತ್ತಾಗಿ ಸ್ಯಾಮಣ್ಣನ ತಂದೆಗೆ ಪತ್ರ ಬರೆದು ಆತನನ್ನು ಕರೆಯಿಸಿಕೊಂಡ. ಅಂದಿನಿಂದ ಮತ್ತಷ್ಟು ಟ್ರೇನಿಂಗ್ ತೆಗೆದುಕೊಂಡ ಸ್ಯಾಮಣ್ಣ ತನ್ನ ಹೆಸರನ್ನು ಶಾರ್ಟ್ ಮಾಡಿಕೊಂಡ. ತಲೆಯಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ಅದಕ್ಕೆ ಕರಿಬಣ್ಣ ಹಚ್ಚಿ ಗಡ್ಡಮಾತ್ರ ಬೆಳ್ಳಗೆ ಮಾಡಿಕೊಂಡ. ನನ್ನ ಊರು ಕಂಪ್ಯೂಟರ್‌ಗಳ ಮಯವಾಗಬೇಕು. ಕಂಪ್ಯೂಟರ್ ಇಲ್ಲದಿದ್ದರೆ ಏನೂ ಇಲ್ಲ ಎಂದು ತೋರಿಸಿಕೊಡಬೇಕು ಎಲ್ಲರೂ ನನ್ನನ್ನು ನೆನಪಿಸಿಕೊಳ್ಳಬೇಕು ಎಂದು ಇದ್ದಬಿದ್ದ ಹಳೆಯ ಕಂಪ್ಯೂಟರ್‌ಗಳನ್ನು ರಿಪೇರಿ ಮಾಡಿ ಅವುಗಳನ್ನು ಲಾರಿಯಲ್ಲಿ ಹೇರಿ ಊರಿಗೆ ಕಳುಹಿಸಿದ. ಅಂದಿನಿಂದ ಎಲ್ಲರೂ ಕಂಪ್ಯೂಟರ್‌ಗಳನ್ನು ಉಪಯೋಗಿಸತೊಡಗಿದರು. ಹೀಗೆ ಸ್ಯಾಮಣ್ಣನ ಕೀರ್ತಿ ಎಲ್ಲೆಡೆ ಹಬ್ಬತೊಡಗಿತು. ಹುಜುರ್‌ಚಂದ್ರನು ಮಾತ್ರ ನನ್ನ ಹುಡುಗ ಸ್ಯಾಮಣ್ಣ ಎಂದು ಬರೆದು ಅದನ್ನು ಪುಸ್ತಕ ರೂಪದಲ್ಲಿ ತಂದ ಆದರೆ ಅದರ ಬಿಡುಗಡೆಗೆ ಸ್ಯಾಮನೇ ಬರಲಿಲ್ಲ ಎಂಬ ಬೇಸರ ಈಗಲೂ ಇದೆಯಂತೆ. ಬೆಳೆಯುತ್ತಿದ್ದ ಸ್ಯಾಮಣ್ಣನಿಗೆ ಕೈ ಮಂದಿ ಗುರುತಿಸಿ ಶಬ್ಬಾಷ್ ಎಂದು ನೀನು ಅಲ್ಲಿಗೆ ಕೈ ಬಾಸ್ ಅಂದರು. ಹೂಂ ಅಂದ ಸ್ಯಾಮಣ್ಣ ಅದರಲ್ಲೂ ಏನೇನೋ ಮಾಡಿ ಬೆಳೆದ. ಆದರೆ ಇತ್ತೀಚಿಗೆ ಮಾತ್ರ ಏನೇನೋ ಮಾತನಾಡುತ್ತಾನಂತೆ…ಮಾತಾಡ್ ಮಾತಾಡ್ ಲಿಂಗವೇ ಎಂದು ಅದ್ಯಾರು ಹೇಳಿದ್ದರೋ ಏನೋ…. ಆತ ಏನೇನೋ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದ ಕೆಲವರು ಏನ್ರೀ ಈ ಸ್ಯಾಮಣ್ಣ ಅನ್ನತೊಡಗಿದರು. ಓರಿಗೆಯವರು ಏನ್ ಸ್ಯಾಮಣ್ಣ ಇದೆಲ್ಲ ಅಂದರು. ಎಲ್ಲರೂ ಹೀಗೆ ಹೇಳಿದ್ದನ್ನು ಕೇಳಿದ ಆತ ಹಾಳೆ ತೆಗೆದುಕೊಂಡು ಏನೇನೋ ಗೀಚಿ ನೀವು ಬ್ಯಾಡ…ಯಾರೂ ಬ್ಯಾಡ ಎಂದು ಅದನ್ನು ಮೊಬೈಲ್‌ನಲ್ಲಿ ಫೋಟೋ ಹೊಡೆದುಕೊಂಡು ಎಲ್ಲರಿಗೂ ಶೇರ್ ಮಾಡಿದ್ದಾನಂತೆ.

Next Article