ಪೊಲಿಟಿಕಲ್ ಬಿಗ್‌ಬಾಸ್…
ಬಿಗ್‌ಬಾಸ್‌ನಲ್ಲಿ ಬರೀ ಇವೇ ಆಗೋಯ್ತು ನಾವು ಇದಕ್ಕೆ ಪರ್ಯಾಯವಾಗಿ ಮತ್ತೊಂದು ಬಿಗ್‌ಬಾಸ್ ಮಾಡೋಣ. ಅಲ್ಲಿ ಕೇವಲ ಪೊಲಿಟಿಕಲ್ ಮಂದಿಯನ್ನು ಕರೆಯೋಣ ಅದಕ್ಕೆ ಪೊಲಿಟಿಕಲ್ ಬಿಗ್‌ಬಾಸ್ ಎಂದು ಕರೆಯೋಣ ಎಂದು ತಿಗಡೇಸಿ ಭರ್ಜರಿ ಪ್ಲಾನ್ ಹಾಕಿದ. ಈ ಬಿಗ್‌ಬಾಸ್‌ಗೆ ಯರ‍್ಯಾರನ್ನು ಸ್ಪರ್ಧಿಯನ್ನಾಗಿ ಮಾಡಬೇಕು ಎಂದು ಕಲ್ಡೇರ್ ಮಮದ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದರು. ಮರುದಿನದಿಂದಲೇ ಸ್ಪರ್ಧಾಳುಗಳ ಹುಡುಕಾಟ ಶುರುವಾಯಿತು. ಇವರು ಇಲ್ಲಿದ್ದುಕೊಂಡೇ ಇಷ್ಟೆಲ್ಲ ಮಾಡುತ್ತಾರೆ. ಅಲ್ಲಿಗೆ ಕಳಿಸಿಬಿಡೋಣ ಎಂದು ಮದ್ರಾಮಣ್ಣ, ಸುಮಾರಣ್ಣ, ಸಿಟ್ಯೂರಪ್ಪ, ಬಂಡೆಸಿವು, ಗುತ್ಲಾಳಣ್ಣ ಅವರನ್ನು ಸಂಪರ್ಕಿಸಿದಾಗ ಅವರೆಲ್ಲರೂ ಯಾಕಾಗವಲ್ದು ಅಂದರು. ಅದರ ಪ್ರಕಾರ ಈಗ ಅವರೆನ್ನೆಲ್ಲ ಬಿಗ್‌ಬಾಸ್ ಮನೆಯೊಳಗೆ ಬಿಡಲಾಯಿತು. ಮನೆಯೊಳಗೆ ಹೋದ ಕೂಡಲೇ ಬಿಗ್‌ಬಾಸ್ ಅಂದರೆ ಅದು ಗಂಡಸಲ್ಲ..ಲೇಡಿಸ್ ಎಂದು ಮದ್ರಾಮಣ್ಣ ಅಂದಾಗ…ಚಾನ್ಸೇ ಇಲ್ಲ. ಬಿಗ್‌ಬಾಸ್ ಅಂದರೆ ಬಿಳಿಗಡ್ಡ, ಬಿಳಿಕೂದಲು, ಬಿಳಿಹುಬ್ಬು, ಯಾವತ್ತೂ ಬೇರೆ ಬೇರೆ ಡ್ರೆಸ್ಸೂ ಮತ್ತು ಆಫ್ ಜಾಕೇಟ್ ಹಾಕಿಕೊಂಡಿರುತ್ತಾರೆ. ಅವರೇ ಬಿಗ್ ಬಾಸ್ ಎಂದು ಸಿಟ್ಯೂರಪ್ಪ, ಗುತ್ನಾಳ್ ಸಾಹೇಬರು ವಾದ ಮಾಡಿದರು. ನೋಡಿ ಬ್ರದರ್…ಬಿಗ್‌ಬಾಸ್ ಅಂದರೆ…ಅವರು ಲುಂಗಿ, ಕಾಲರ್ ಇಲ್ಲದ ನೆಹರೂ ಶರ್ಟ್ ಹಾಕಿಕೊಂಡಿರುತ್ತಾರೆ. ಸಣ್ಣಗೇ ಮಾತನಾಡುತ್ತಾರೆ. ಮಾತಿನ ಮಧ್ಯೆ ಮೂಗನ್ನು ತುರಿಸಿಕೊಳ್ಳುತ್ತಾರೆ. ನಿಜವಾಗಿ ಅವರೇ ಬಿಗ್‌ಬಾಸ್ ಅಂದರು. ಬಂಡೆಸಿವು ಮಾತ್ರ…ಓಯ್ ಸುಮ್ನಿರಿ ಸಾಕು…ಬಿಗ್‌ಬಾಸ್ ಎಂದಾದರೆ ಮದ್ರಾಮಣ್ಣೋರು ಇಲ್ಲಾ ನಾನು ಅಷ್ಟೆ. ಇನ್ನೂ ಒಂದು ವರ್ಷ ಅಷ್ಟೆ. ಆಮೇಲೆ ನಾನೇ ಬಿಗ್‌ಬಾಸ್ ನೋಡುತಿರಿ ಎಂದು ವಾದ ಮಾಡಿದರು. ಅಷ್ಟರಲ್ಲಿ ಮೈಕುಗಳಿಂದ ಬಂದ ದನಿಕೇಳಿ ಎಲ್ಲರೂ ಸುಮ್ಮನಾದರು. ಸುಮಾರಣ್ಣ ಸುಮ್ಮನೇ ಕೂಡದೇ, ನೋಡಿ ಬ್ರದರ್…ನಾವು ನೀವು ಒಂದಾಗಿದ್ದೇವೆ…ಮದ್ರಾಮಣ್ಣ ನೋಡಾ-ಭರ್ಜರಿ ಮುಡಾ ಎಂದು ಹೇಳಿದ. ಕ್ಯಾಮರಾದಲ್ಲಿ ಅದನ್ನು ಕೇಳಿಸಿಕೊಂಡ ಮದ್ರಾಮಣ್ಣ…ಅಲಲಲಾ….ನೀವೇನೋ ಮಾಡೋದು…ನಿಮದೂ ಇದೆ…ಅವರದ್ದೂ ಇದೆ…ಇವರದ್ದೂ ಇದೆ ಎಂದು ಜೋರಾಗಿ ಹೇಳಿದರು. ಆ ಕಡೆ ಕುಳಿತಿದ್ದ ಬಂಡೆಸಿವು-ಗುತ್ನಾಳಣ್ಣೋರು ಓಡಿಬಂದು…ಹೋಗಲಿ ಬುಡ್ರೀ…ಹೋಗಲಿ ಬುಡ್ರಿ ಎಂದು ಜಗಳ ಬಿಡಿಸಿದರು. ಮರುದಿನದಿಂದ ಆ ಬಿಗ್‌ಬಾಸ್ ಮನೆಗೆ ಕೀಲಿ ಹಾಕಲಾಗಿತ್ತು.