For the best experience, open
https://m.samyuktakarnataka.in
on your mobile browser.

ಐಂದ್ರಿಕ ಸೆಳೆತಕ್ಕೆ ಒಳಗಾಗಿಸದಿರು ಮೃಡಗಿರೀಶಾ

12:59 AM Dec 03, 2023 IST | Samyukta Karnataka
ಐಂದ್ರಿಕ ಸೆಳೆತಕ್ಕೆ ಒಳಗಾಗಿಸದಿರು ಮೃಡಗಿರೀಶಾ

ಪ್ರತಿಯೊಬ್ಬರ ಜೀವನದಲ್ಲಿ ಸುಂದರವಾಗಬೇಕು. ಇದು ಎಲ್ಲರ ಬಯಕೆಯೂ ಆಗಿದೆ. ಆದರೆ ಬಹುಶಃ ಬಹಳ ಜನರು ಆ ಮಾರ್ಗದಲ್ಲಿ ನಡೆಯುವುದಿಲ್ಲ, ನ್ಯಾಯ ನೀತಿಯಿಂದ ನಡೆಯಬೇಕು. ಸತ್ಯ, ಶುದ್ಧ ಕಾಯಕವುಳ್ಳವನಾದರೆ ಬದುಕು ಸಶಕ್ತವಾಗಿವುದು. ದೈನಂದಿನ ಬಾಳುವನಿಗೆ ಕೊರತೆಯಾಗುವುದಿಲ್ಲ, ವೃತಿರಿಕ್ತವಾದ ನಡತೆಯಿಂದ ಜೀವನಕ್ಕೆ ಸುಖ, ಶಾಂತಿ ಲಭಿಸುವುದಿಲ್ಲ,
ನುಣ್ಣಣೆಯ ಬಣ್ಣಕೆ ಮರುಳಾಗುತದೇ ಜೀವ,
ಬಣ್ಣನೆಯ ಮಾತಿಗೆ ಬೆರಗಾಗುತ್ತದೆ ಜೀವ,
ಬಣ್ಣದ ಬಹುರೂಪ ಬಣ್ಣಗೆಡಿಸುತ್ತಿದೆ ಹೇಡೆನು
ಹೆಣ್ಣಿಗೆ ಬಣ್ಣದ ಮೋಹ ಕಣ್ಣಿಗೆ ಮೋಹ ಮುಕ್ಕಣ್ಣ ಮೃಡಗಿರಿ ಅನ್ನದಾನೀಶ!
ಕಣ್ಣಕಾಮನೆ ಕಳೆದು ಜೀವನ ಬಣ್ಣವೇರಿಸಯ್ಯಾ ನಿಮ್ಮ ಧರ್ಮ, ಸುಂದರ ರೂಪ ಕಂಡರೆ ಮಾನವ ಮರುಳಾಗುದು ಸಹಜ. ಬಣ್ಣ ಮಾತುಗಳಿಗೆ ಅಂದರೆ ಮರುಳಾಗುವ ತೆರದಿ ಮಾತುಗಳನ್ನಾಡಿ ವಶವಾಗುವಂತೆ ಮಾಡುವದು. ಇಂಥ ಮಾತುಗಳಿಗೆ ಜೀವ ಬೆರಗಾಗುತ್ತದೆ. ಇದು ಸಹಜ ರೂಢಿ, ಆದರೆ ಇಂತಹ ಕೃತಿನು ಬಣ್ಣ ಮರುಳು ಮಾಡುವ ಮಾತಿಗೆ ಮರುಳಾಗಿ ತನ್ನ ಜೀವನವನ್ನು ಹಾಳು ಮಾಡುಕೊಳ್ಳುವವರು. ಹೆಣ್ಣು ಮಕ್ಕಳಾದರೂ ಬೇರೆಬೇರೆ ಬಣ್ಣದ ವೇಷವನ್ನು ಅಂದರೆ ತನ್ನತ್ತ ಗಮನ ಸೆಳೆಯುವಂತೆ ಅರಿವೆಗಳನ್ನು ಧರಿಸಿ, ವೇಷದಲ್ಲಿ, ಕೇಶ ವಿನ್ಯಾಸದಿಂದ ಇತ್ಯಾದಿಗಳಿಂದ ಸಹಜವಾಗಿಯೇ ಚಿತ್ತ ಚಂಚಲರನ್ನಾಗಿ ಮಾಡುತ್ತ ಆಕರ್ಷಕರಾಗುವರು. ಹೀಗಾಗಿ ಬಣ್ಣಗಳು ಕಣ್ಣಿಗೆ ಬೇಕೆನಿಸುವದು ಲೋಕರೂಢಿಯೇ ಆಗಿದೆ. ಆದರೆ ಇಂಥ ಎಲ್ಲ ಕರ್ಷಣಗಳಿಗೆ ಆಕರ್ಷಿತನಾಗದಂತೆ ಶಿವಸ್ವರೂಪಿ ಅನ್ನದಾನೀಶನಲ್ಲಿ ಚಿತ್ತ ನೆಲೆಸುವಂತೆ ಮಾಡು ಎಂದು ಸದಾ ಬೇಡಿಕೊಳ್ಳಬೇಕು. ಐದ್ರಿಯ ಸೆಳೆತದಿಂದ ದೂರವಾಗಿಸಿ ಜೀವನ ಸುಂದರವಾಗುವಂತೆ ಹರಸು. ಆದರ್ಶ ನಡೆ-ನುಡಿ ನಮ್ಮದಾಗಬೇಕು. ಆದರ್ಶ ಬುದುಕು ಉಳ್ಳಾವನಾದರೆ, ಜೀವನ ಸುಂದರವಾಗುವುದುರಲ್ಲಿ ಸಂಶಯವಿಲ್ಲ.