ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಂದು ಫೋನಿನಲ್ಲಿ ಎಷ್ಟು ಧ್ವನಿಗಳು?

03:00 AM Jul 30, 2024 IST | Samyukta Karnataka

ಮದ್ರಾಮಣ್ಣ-ಬಂಡಿಸಿವು ಇಬ್ಬರೂ ಕೈ ಕಮಾಂಡ್ ಕರೆದರೆಂದು ಡೆಲ್ಲಿಗೆ ಹೋದ ತಕ್ಷಣವೇ ಇಲ್ಲಿ ಅನೇಕ ಕುತೂಹಲಕಾರಿಗಳು ಈ ಬಾರಿ ನಂಗೆ… ಈ ಬಾರಿ ನಂಗೆ… ನನ್ನ ಬಿಟ್ಟರೆ ಯಾರಿಲ್ಲ… ಉಳಿದವರಿಗೆ ಏನೂ ಇಲ್ಲ ಎಂದು ಅನ್ನುತ್ತಿದ್ದಾರೆ. ಇದೇನೂ ಮೊದಲ ಬಾರಿಗೆ ಹೋಗುತ್ತಿದ್ದಾರಾ? ಕೈ ಕಮಾಂಡ್ ಹಗಲೆಲ್ಲ ಕರೆಯಿಸಿಕೊಂಡಿದೆ… ಇವರೆಲ್ಲ ಹೋಗಿ ಬಂದಿದ್ದಾರೆ ಏನಾದರೂ ಆಯಿತಾ? ಏನೂ ಇಲ್ಲವಲ್ಲ? ಇರ‍್ಯಾಕೆ ತಲೆಕೆಡೆಸಿಕೊಳ್ಳುತ್ತಾರೋ ಎಂದು ಈಗಾಗಲೇ ಕೆಂಪುಗೂಟದ ಕಾರಿನಲ್ಲಿ ಅಡ್ಡಾಡುವವರು ಕಣ್ಣು ಕೆಂಪಗೆ ಮಾಡಿ ಅನ್ನುತ್ತಿದ್ದಾರೆ. ಕೆಂಪುಗೂಟದ ಕಾರಿನಲ್ಲಾದರೂ ಅಡ್ಡಾಡಲಿ, ಬಾಡಿಗೆ ಕಾರಿನಲ್ಲಾದರೂ ತಿರುಗಾಡಲಿ ಎಲ್ಲವೂ ಒಂದೇ ಈಗ. ಇವು ಸುಮ್ಮನೇ ತಲೆ ಕಡೆಸಿಕೊಂಡಿವೆ ಎಂದು ತಿರುಕೇಸಿ ಫೇಸ್‌ಬುಕ್ಕಿನಲ್ಲಿ ಹಾಕಿಕೊಂಡಿದ್ದಾನೆ. ಇಲ್ಲಿಲ್ಲ… ಅವನು ಫೇಸ್ಬುಕ್‌ನಲ್ಲಾದರೂ ಹಾಕಿಕೊಳ್ಳಲಿ… ಇನಸ್ಟಾದಲ್ಲಾದರೂ ಇರಿಸಲಿ, ಅಲ್ಲಿ ಆಗುವುದೇ ಬೇರೆ-ಇಲ್ಲಿ ಆಗುವುದೇ ಬೇರೆ. ಇನ್ನೂ ಕೇವಲ ಎರಡೇ ದಿನ ಎಲ್ಲವೂ ಗೊತ್ತಾಗುತ್ತದೆ. ಗೊತ್ತಾದ ಮೇಲೆ ಇವರ ಬಣ್ಣ ಬಯಲಾಗುತ್ತದೆ… ಇವು ಹೀಗೆಯೇ ಇರುತ್ತವೆ. ನಾವು ಹಾಗೆಯೇ ಇರುತ್ತೇವೆ ಎಂದು ಆ ಮಂದಿ ಸಾರಿ.. ಸಾರಿ ಹೇಳುತ್ತಿದ್ದಾರೆ. ಇವೆಲ್ಲ ಬೇಡವೇ ಬೇಡ ನಾವು ಸೀದಾ ಸೋನಮ್ಮಾರಿಗೇ ಕೇಳಿಬಿಡೋಣ ಎಂದು ಹಲವರು ಮದ್ರಾಮಣ್ಣರಿಗೆ ಮಾಡಿ ಕಾನ್‌ಕಾಲ್ ಹಾಕಿದರು.
ಆ ಕಡೆಯಿಂದ ಏಳಪಾ ಅಂದ ಕೂಡಲೇ…. ಈ ಕಡೆಯಿಂದ ಹತ್ತಾರು ಧ್ವನಿಗಳು ನಮಸ್ಕಾರ ಸಾರ್.. ನಮಸ್ಕಾರ ಎಂದು ಕೇಳಿದ ಕೂಡಲೇ ಗಾಬರಿಯಾದ ಮದ್ರಾಮಣ್ಣೋರು… ಅಲಾ ಇವ್ನ ಒಂದು ಪೋನಿನಲ್ಲಿ ಎಷ್ಟು ದ್ವನಿ ಕೇಳುತ್ತವೆ ಅಂದುಕೊಂಡು… ಯರ‍್ರೀ ಇದು ಅಂದ ಕೂಡಲೇ… ಸಾರ್.. ನಾನು ಇಂಥವನು, ಇನ್ನೊಬ್ಬ ಸಾರ್ ನಾನು… ಮತ್ತೊಬ್ಬ ಸಾಹೇಬರೇ ನಾನ್ರೀ… ಅನ್ನುತ್ತಿದ್ದಂತೆ… ಲೇಡೀಸ್ ಧ್ವನಿಯಿಂದ.. ಅಣ್ಣೋರೆ ನಾನು ಅಂದಾಗ.. ಅಯ್ಯೋ ನೀವೆಲ್ಲ ಯಾಕೆ ಮಾಡಿದಿರಿ ಎಂದರು. ಅದಕ್ಕೆ ಸಾಹೇಬ್ರೆ ಎಂಗೂ ಅಲ್ಲೇ ಹೋಗಿದ್ದೀರಿ ಅಲ್ವ… ನಮ್ಮನ್ನು ಸೇರಿಸಿಕೊಳ್ಳಿ ಸಾಹೇಬ್ರೆ ಅಂದರು. ಅಲ್ರಯ್ಯ ನಾನು ಎಲ್ಲಿ ಹೋಗಿದ್ದೀನಿ? ಏನ್ಕತೆ… ನಿಮ್ಮದೊಂದು ಭಾರೀ ಕಾಟ ಆಯ್ತು ಅಂದು ಫೋನು ಕಟ್ ಮಾಡಿ ಸ್ವಿಚ್ಡಾಫ್ ಮಾಡಿದರು.

Next Article