ಒಂದೆಲಗ (ಬ್ರಾಹ್ಮಿ) ಚಟ್ನಿ
12:12 AM Aug 13, 2022 IST | Samyukta Karnataka
ಬೇಕಾಗುವ ಪದಾರ್ಥಗಳು: ೨೦-೨೫ ಒಂದೆಲಗ (ಬ್ರಾಹ್ಮಿ) ಎಲೆಗಳು, ೪-೫ ಹಸಿಮೆಣಸಿನಕಾಯಿ, ಕರಿಬೇವು ೬-೮ ಎಲೆ, ಬಿಳಿಎಳ್ಳು ೨ ಚಮಚ, ಉದ್ದಿನಬೇಳೆ ೨ ಚಮಚ, ಹುಣಸೇ ರಸ ೧ ಚಮಚ, ಚಿಟಿಗೆ ಬೆಲ್ಲ, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು.
ಮಾಡುವ ವಿಧಾನ: ಒಂದೆಲಗದ ಎಲೆಗಳನ್ನು ತೊಳೆದು ಬಟ್ಟೆಯಲ್ಲಿ ನೀರಿಲ್ಲದಂತೆ ಒರೆಸಿ, ಕರಿಬೇವಿನ ಜೊತೆ ಅರ್ಧ ಚಮಚ ಎಣ್ಣೆಯೊಂದಿಗೆ ಚೆನ್ನಾಗಿ ಹುರಿಯಬೇಕು. ಅದರ ಜೊತೆ ಹಸಿಮೆಣಸಿನಕಾಯಿಯನ್ನು ಬಾಡಿಸಬೇಕು. ಉದ್ದಿನಬೇಳೆ, ಎಳ್ಳು ಕೆಂಪಗೆ ಹುರಿದು ಆರಿದ ನಂತರ ಉಪ್ಪು ಹುಣಸೇ ರಸದೊಂದಿಗೆ ನುಣ್ಣಗೆ ರುಬ್ಬಿ. ಇದಕ್ಕೆ ಸಾಸಿವೆ, ಇಂಗಿನ ಒಗ್ಗರಣೆ ಸೇರಿಸಿದರೆ ರುಚಿಯಾದ ಒಂದೆಲಗ ( ಬ್ರಾಹ್ಮಿ) ಚಟ್ನಿ ತಯಾರು.
- ಗಿರಿಜಾ ಎಸ್.ದೇಶಪಾಂಡೆ, ಬೆಂಗಳೂರು.