"ಕನ್ನಂಬಾಡಿಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ"
ನಮ್ಮ ಕರುನಾಡ ತಾಯಿಯ ಆಶೀರ್ವಾದ ಪಡೆದು ರಾಜ್ಯದ ಜನತೆಗೆ ಉತ್ತಮವಾದ ಮಳೆ ಸಿಗಲಿ ಎಂದು ಪ್ರಾರ್ಥಿಸಿದ್ದೆವು.
ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಿಸಿ ನಂತರ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು ಇದೊಂದು ರೋಮಾಂಚನೀಯ ಕ್ಷಣ… ಇದೊಂದು ಸಂಭ್ರಮದ ದಿನ "ಕನ್ನಂಬಾಡಿಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ" ಮಂಡ್ಯ, ಮೈಸೂರ, ಹಾಸನ ಹಾಗೂ ತಮಿಳುನಾಡಿನವರೆಗೂ ಈ ಕಟ್ಟೆಯು ಬದುಕು ಕಟ್ಟಿಕೊಟ್ಟಿದೆ. ಇದು ನಮ್ಮ ಬದುಕಿನ ಜೀವನದಿ. ನಾವು ನೀವು 92 ವರ್ಷವಾದರೂ ಈ ತಾಯಿಗೆ ನಮನ ಅರ್ಪಿಸಲು ಬಂದಿದ್ದೇವೆ. ನಮ್ಮ ಕರುನಾಡ ತಾಯಿಯ ಆಶೀರ್ವಾದ ಪಡೆದು ರಾಜ್ಯದ ಜನತೆಗೆ ಉತ್ತಮವಾದ ಮಳೆ ಸಿಗಲಿ ಎಂದು ಪ್ರಾರ್ಥಿಸಿದ್ದವು. ಮನುಷ್ಯನ ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ಫಲಿಸುತ್ತದೆ. ತಾಯಿ ತುಂಬಿ ಹರಿಯುತ್ತಿರುವು, ಒಂದು ದೊಡ್ಡ ಸಾಕ್ಷಿ. 7 ಪವಿತ್ರವಾದ ನದಿಗಳನ್ನು ಭಾರತದ ಎಲ್ಲಾ ಜನರು ಅವಲಂಭಿಸಿದ್ದೇವೆ. ಕಾವೇರಿ ನದಿ ಪವಿತ್ರ ನದಿಗಳಲ್ಲೊಂದು.
ಮೈಸೂರಿನ ಸುತ್ತಮುತ್ತಲೂ ಹಲವಾರು ಪ್ರವಾಸಿ ತಾಣಗಳಿದ್ದು ಅವುಗಳನ್ನು ಉತ್ತೇಜನ ಮಾಡಿ ಅಭಿವೃದ್ಧಿ ಮಾಡಬೇಕು. ಖಾಸಗಿ ಮತ್ತು ಸರ್ಕಾರ ಸಹಕಾರದೊಂದಿಗೆ ಕೆಆರ್‌ಎಸ್ ಬೃಂದಾವನನವನ್ನು ವಿಶ್ವದರ್ಜೆಗೆ ಏರಿಸಲು ಪಿ.ಪಿ.ಪಿ ಮಾದರಿಯಲ್ಲಿ ‘ಅಮ್ಯೂಸ್‌ಮೆಂಟ್ ಪಾರ್ಕ್ʼ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಗಂಗಾ ಆರತಿಯಂತೆ, ಪ್ರತಿ ವಾರವೂ ಕಾವೇರಿ ಆರತಿ ಆಗಬೇಕೆಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ವರದಿ ಸಲ್ಲಿಸಲು ತಿಳಿಸಲಾಗಿದೆ. ಮುಂದಿನ ವರ್ಷದಿಂದ ಕಾವೇರಿ ನಿಗಮದ ವತಿಯಿಂದ 5 ಜನರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಇದೇ ರೀತಿ ಮಳೆ ಬೆಳೆಯಾಗಿ ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಒಳ್ಳೆಯದಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸೋಣ. ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡೋಣ ಎಂದರು.