ಕಮಲದ ಗಲಾಟೆ ಪೈಲವಾನರ ಲಗಾಟಿ
ಹರಿಯಾಣದ ಪೈಲವಾನರನ್ನು ಅದೆಷ್ಟು ಕಾಡಿದರೂ ಅವರು ನಮ್ಮನ್ನು ಬಿಡಲಿಲ್ಲ… ಕೈ ಮಂದಿ ದಿನಾಲೂ ಚಾಡಿ ಹೇಳಿದರೂ ಅವರ ಕೈ ಹಿಡಿಯಲಿಲ್ಲ… ಇದೇ ಅಂತರಂಗದ ಶುದ್ಧಿ…. ನಮ್ಮ ಭಯಂಕರ ಬುದ್ಧಿ… ಆವೋ…. ಸ್ವೀಟ್ ಖಾವೋ ಎಂದು ಸೋದಿ ಮಾಮಾರು ಕೊಕ್ಕೊಕ್ಕೆಂದು ನಕ್ಕರು. ಈ ಪೈಲವಾನರನ್ನು ಕೂಡಿಸಿ ಕೊಂಡು… ಅಯ್ಯೋ.. ಅಯ್ಯೋ… ನೀವೆಷ್ಟು ಸೊರಗಿದಿರೋ… ನಿಮ್ಮ ಮೇಲೆ ಅವರು ಮಾಡಿದ್ದು ಒಂದಾ ಎರಡಾ…. ಚಿಂತೆ ಮಾಡಬೇಡಿ… ನಮ್ಮನ್ನು ಆರಿಸಿ ತನ್ನಿ… ನಿಮಗೆಲ್ಲ ಎರಡು ಹೊತ್ತು ಫುಲ್ ಅಂಡಾಕರಿ… ಗೋವಿನ ಜೋಳದ ರೊಟ್ಟಿ ಹಾಕುತ್ತೇವೆ ಅಂದರೂ ಅವರು ಕೇಳಲಿಲ್ಲ… ಎಂಥಾ ಕಾಲ ಬಂತಪ್ಪಾ ಎಂದು ಸೋನಮ್ಮಾರು ಅನುತಿರಲು… ಹೊರಗಿನಿಂದ ಆಡುತ್ತ ಬಂದ ಕಂದನು.. ಅಮ್ಮಾ ಡೋಂಟ್‌ವರೀ…. ಬರೀ ಪೈಲವಾನರಷ್ಟೇ ಅಲ್ಲ… ಹೊಲ ಮನಿ ಮಾಡೋರೂ ಸಹ ಹಿಂಗೆ ಮಾಡಿದರು… ಚಿಂತೆ ಬೇಡ… ನಾನಿದ್ದೇನೆ… ಅಜ್ಜಾರಿದ್ದಾರೆ…. ನಮಗೆ ಇದು ಇಲ್ಲದಿದ್ದರೇನಂತೆ… ತಾತನ ಮೆಚ್ಚಿನ ತಾಣ… ಜಮ್ಮು.. ಕಾಶ್ಮೀರದಲ್ಲಿದೇವೆ… ಮುಂದೆ ಎಲ್ಲೆಲ್ಲಿ ಬೇಕೋ ಅಲ್ಲಿರ್ತೇವೆ ಅಂದಾಗ ಏನೋ ಏನಪ್ಪ ಅಂತ ಸುಮ್ಮನಾದರು ಅಮ್ಮೋರು. ಇತ್ತ ನಮ್ಮೋಣಿಯಲ್ಲಿ ಮದ್ರಾಮಣ್ಣೋರು… ಅಲಾಇವ್ನ ಗೆದ್ದಿದ್ರ ನನಗ ಗಂಟು ಬೀಳ್ತಿದ್ರೋ ಏನೋ ಎಂದು ನಾಲಗೆಯಿಂದ ತುಟಿ ಸವರಿಕೊಂಡರಂತೆ… ಬಂಡೆ ಸಿವು… ಭಾವನೆ ಮತ್ತು ಬದುಕು ಎರಡರ ಸಮ್ಮಿಲನವೇ ಇದು ಅಂತ ಅಂದಾಗ… ಕಂಜಾಚುಲೇಸ್ಯನ್ ಬ್ರದರ್ ಕಂಜಾಚುಲೇಸ್ಯನ್… ಅಂತ ಗುಮೀರ್ ಜುಮದ್ ತನ್ನದೇ ಸ್ಟೈಲ್ನಲ್ಲಿ ಹೇಳಿದನಂತೆ… ಆ ಕಡೆ ಸಿಟ್ಯೂರಪ್ಪ ಅವರ ಮುದ್ದುಕಂದ ದೊಡ್ಡ ದೊಡ್ಡ ಪಟಾಕಿ ಸಿಡಿಸಿ ಹರ‍್ರಾ ಅಂದು ಕುಣಿದನಂತೆ. ಅದನ್ನು ಕಂಡ ಗುತ್ನಾಳಣ್ಣೋರು… ಇಂವ ಏನಿಂವ ದೀಪಾವಳಿ ಈಗ ಮಾಡ್ತಾ ಇದಾನೇನು ಅಂದು ಹಣೆಯಲ್ಲಿನ ಉದ್ದ ಕುಂಕುಮ ಸರಿ ಮಾಡಿಕೊಂಡನಂತೆ. ಅಲ್ಲಿ ಆದದ್ದು ಇಲ್ಲಿ ಹೇಗೆ ಎಪೆಕ್ಟಾತು ನೋಡಿ ಎಂದು ಕಿವಿಡನುಮಿ ಪ್ಯಾನಲ್ ಡಿಸ್‌ಕಷನ್ನಿನಲ್ಲಿ ಒದರಿ ಒದರಿ ಹೇಳಿದಳಂತೆ.