ಕಮಲೇಶ್ವರ ನಾಟ್ಯ ಸಂಘದ ವತಿಯಿಂದ ಮತ್ತೊಮ್ಮೆ ಆಪರೇಷನ್
ಕಮಲೇಶ್ವರ ನಾಟ್ಯ ಸಂಘದ ಡೆಲ್ಲಿ ಸಾಹೇಬರಿಗೆ ಡಬಲ್ ಶಿ.ಸಾ ಸ್ಕಾರ.. ನೀವು ಅಲ್ಲಿಂದ ಬಂದಿರುವಿರಿ ಎಂದು ಭಾವಿಸುವೆ. ಉಲ್ಲೇಖ ೬೬/೧೩೬ ರಲ್ಲಿ ತಾವು ಬರೆದ ಪತ್ರ ಬಂದು ತಲುಪಿತು. ಹತ್ತತ್ತು ಸಲ ಓದಿ ಉತ್ತರ ಕೊಡುತ್ತಿದ್ದೇವೆ.
ನಿಮ್ಮ ಪತ್ರದಲ್ಲಿ… ನೋಡ್ರಪಾ ಕತ್ತರಿ… ಸಣ್ಣಚಾಕೂ ಸೇರಿ ಎಲ್ಲವನ್ನೂ ಸಾಣೆ ಹಿಡಿಸಿ ಚೂಪು ಮಾಡಿಟ್ಟುಕೊಳ್ಳಿ. ಸಮಯ ಸಿಕ್ಕಿತು ಅಂದರೆ ಆಪರೇಷನ್ ಮಾಡಿಬಿಡಿ ಅಂತ ಹೇಳಿದ್ದೀರಿ. ಎಸ್… ನಿಮ್ಮ ಮಾತಿಗೆ ಒಪ್ಪಿದೆ. ಸಾಹೇಬರೇ ಮೊದಲಿನಿಂದಲೂ ನಮಗೆ ಒಳ್ಳೇ ಡಾಕ್ಟರ್ ..ಆಪರೇಷನ್‌ನಲ್ಲಿ ಎತ್ತಿದ ಕೈ ಅಂತ ಹೆಸರೂ ಇದೆ. ಇಂತಹ ಹೆಸರಿನಿಂದಲೇ ನಾವು ಬರೋಬ್ಬರಿ ೬೬ ಆಗಿದ್ದೇವೆ. ಸಾಹೇಬ್ರೆ ನೀವು ತಿಳಿಕೊಂಡಿರೋ ಹಾಗೆ ಇಲ್ಲಿ ಆಪರೇಷನ್ ಮಾಡುವುದು ಅಷ್ಟೊಂದು ಸುಲಭ ಅಲ್ಲ. ಮೊದಲಾದರೆ ಆಪರೇಷನ್ ಆಂದರೆ ಬರೋರು. ಈಗ ಓಗ್ರಪಾ ಅಂತಾರೆ. ಅದಕ್ಕಿಂತ ಹೆಚ್ಚಾಗಿ ಆಗಿನಿಗಿಂತ ಈಗ ಬಹಳಷ್ಟು ಜನರಿಗೆ ಆಪರೇಷನ್ ಮಾಡಬೇಕು. ಸ್ವಲ್ಪ ಮಂದಿಗೆ ಮಾಡಬಹುದು. ಆದರೆ ಅದು ಉಪಯೋಗವಿಲ್ಲ. ನಮ್ಮ ಬಗ್ಗೆ ಪ್ರೀತಿ..ಗೌರವ ಇರೋರು ಸಾರ್ ಮಾಡಿಬಿಡಿ ಆಪರೇಷನ್… ಬೇಕಾದರೆ ನಾನು ಚಾ ಪಾನಿ ಖರ್ಚು ಕೊಡುತ್ತೇನೆ ಅಂತಿದಾರೆ… ಅದು ಏನಕ್ಕೆ ಸಾಲುತ್ತೆ ಸ್ವಾಮೀ… ನೀವೇ ಹೇಳಿ. ಈಗನೇದರೂ ನಾವು ಆಪರೇಷನ್‌ಗೆ ಕೈ ಹಾಕಿದರೆ ಜನರು ನಮ್ಮನ್ನು ಸುಮ್ನೆ ಬಿಡಂಗಿಲ್ಲ ಅದು ಹಿರಿಯರಾದ ನಿಮಗೂ ಗೊತ್ತಿದೆ. ಈಗಾಗಲೇ ನಾವು ಹೊಸಕತ್ತರಿ… ಚಾಕು… ಗ್ಲೌಸು ಎಲ್ಲ ತರಿಸಿಕೊಂಡಿದ್ದು ಬಂಡೆಸಿವುಗೆ ಗೊತ್ತಾಗಿದೆ. ಆತನೇ ಸುದ್ದಿ ಹಬ್ಬಿಸಿದ್ದಾನೋ ಏನೋ ಹೋದಲ್ಲಿ ಬಂದಲ್ಲಿ ನಮಗೆ ಏನು ಡಾಕ್ಟ್ರೇ ಆಪರೇಷನ್ನಾ? ಎಂದು ಕೇಳುತ್ತಿದ್ದಾರೆ. ಈಗ ನಾನೊಂದು ಮಾತು ಹೇಳುತ್ತೇನೆ. ಸದ್ಯಕ್ಕೆ ಆಪರೇಷನ್ ಬೇಡ… ಮುಂದೆ ಇದ್ದೇ ಇದೆಯಲ್ಲ ನಮ್ಮ ಆಪರೇಷನ್ನು.. ಅಂದಹಾಗೆ ಇನ್ನೊಂದು ವಿಷ್ಯ ಸಾಹೆಬ್ರೆ., ಮುಂದೆ ಇದ್ದೇ ಇದೆಯಲ್ಲ ಆವಾಗ ಐತಿ.. ಹಬ್ಬ.