For the best experience, open
https://m.samyuktakarnataka.in
on your mobile browser.

ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್: ಚಿನ್ನ ಗೆದ್ದ ಪ್ರದೀಪ್ ಆಚಾರ್ಯ

04:26 PM Oct 05, 2024 IST | Samyukta Karnataka
ಕಾಮನ್ ವೆಲ್ತ್ ಪವರ್ ಲಿಪ್ಟಿಂಗ್  ಚಿನ್ನ ಗೆದ್ದ ಪ್ರದೀಪ್ ಆಚಾರ್ಯ

ಮಂಗಳೂರು: ಸೌತ್ ಆಫ್ರಿಕಾದ ಸನ್ ಸಿಟಿಯಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ 2024 ರ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ 237.50 ಕಿಲೊ ಭಾರ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ‌.
ನ್ಯೂ ಸೌತ್ ವೆಲ್ಸ್ ನ ಥಾಮಸ್, ಇಂಗ್ಲೆಂಡ್ ನ ಟೇಲರ್ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗೆದ್ದುಕೊಂಡರು..
ಪ್ರದೀಪ್ ಕುಮಾರ್ ಅವರು ಮಂಗಳೂರಿನ ಬಾಲಾಂಜನೇಯ ಜಿಮ್ನಾಸಿಯಂ ನ ಸದಸ್ಯ. ಸತೀಶ್ ಕುಮಾರ್ ಕುದ್ರೋಳಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಮಂಗಳೂರಿನ ಕಷಾರ್ಪ್ ಫಿಟ್ನೆಸ್ ಸಂಸ್ಥೆಯ ಲ್ಲಿ ಜನರಲ್ ಮ್ಯಾನೇಜರ್ ಕೆಲಸ ಮಾಡುತ್ತಿದ್ದಾರೆ.