For the best experience, open
https://m.samyuktakarnataka.in
on your mobile browser.

ನನ್ನ ಮುಂದೆ ಹಾರಾಡೋಕೆ ಆಗಲ್ಲ…

03:00 AM May 20, 2024 IST | Samyukta Karnataka
ನನ್ನ ಮುಂದೆ ಹಾರಾಡೋಕೆ ಆಗಲ್ಲ…

ನನ್ನ ಮುಂದೆ ಹಾರಾಡೋಕೆ ಆಗಲ್ಲ…
ಆರ್‌ಸಿಬಿ ಗೆದ್ದು ಪ್ಲೇಆಫ್ ಪ್ರವೇಶಿಸುತ್ತಿದ್ದಂತೆ ಅನುಷ್ಕಾ ಬಾಯರು… ಕಂಟಿದುರುಗಮ್ಮನ ಗುಡಿಗೆ ಹೋಗಿ ಜೋಡುಗಾಯಿ ಒಡೆಸಿಕೊಂಡು ಬರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತು. ಇದೇ ಸುಸಂದರ್ಭ ಈಗಲೇ ಅವರ ಸಂದರ್ಶನ ಮಾಡಿದರೆ ನನ್ನದು ಫುಲ್ ಡಿಮ್ಯಾಂಡು ಅಂದುಕೊಂಡ ಗುಂದದಣ್ಣನ. ಮಗಳು ಕುಸ್ಮಿಕಾ ದಡಬಡಿಸಿ ತನ್ನ ಮೈಕು ಲೋಗೋ ಪಾಗೋ ತೆಗೆದುಕೊಂಡು ಹೋಗಿ ಅನುಷ್ಕಾ ಬರುವುದನ್ನೇ ಕಾಯ್ದಳು… ಸ್ವಲ್ಪ ಹೊತ್ತಾದ ಮೇಲೆ ಐದಾರು ಕಾರುಗಳು ದುರುಗಮ್ಮನ ಗುಡಿಯ ಮುಂದೆ ಬಂದು ನಿಂತವು… ಯಾವ ಕಾರಿನಲ್ಲಿ ಯಾರಿದ್ದಾರೆ? ಎಂದು ಒಂದೂ ಗೊತ್ತಾಗದೇ ನಿಂತ ಕುಸ್ಮಿಕಾಗೆ… ಮೂರನೇ ಕಾರಿನಿಂದ ಇಳಿದ ಅನುಸ್ಕಾ ಆಕೆಯ ಹಿಂದೆಯೇ ಇಳಿದ ವಿರಾಟೇಸ್ವರನ ಹತ್ತಿರ ಓಡಿಹೋಗಿ ಇರಾಟನ ಮಾರಿ ಮುಂದೆ ಮೈಕ್ ಹಿಡಿದಾಗ..
ಇರಾಟ- ನಮಸ್ತೆ ಹೇಳಿ
ಕುಸ್ಮಿಕಾ- ಸರ್ ನೀವು ಮಸ್ತ್ ಆಡಿದ್ರಿ…
ಇರಾಟ; ಹೌದೌದು
ಕುಸ್ಮಿಕಾ; ಗೆಲುವಿಗೆ ಸ್ಫೂರ್ತಿ ಏನು?
ಇರಾಟ: ಇಲ್ಲಿದ್ದಾಳಲ್ಲ ಈಕೆನೆ
ಕುಸ್ಕಿಕಾ: ಮೇಡಂ ಏನನಸ್ತಿದೆ..
ಅನುಸ್ಕಾ: ನಿನ್ನೆ ಕುಂತಲ್ಲೇ ಕುಂತ್ ಕುಂತ್ ಬೆನ್ನು ನೋಸ್ತಿದೆ…
ಕುಸ್ಮಿಕಾ; ಅದಲ್ಲ ಮೇಡಂ…ನಿಮನೆಯವರು ಗೆದ್ದರಲ್ಲ ಅದಕ್ಕೆ….
ಅನುಸ್ಕಾ: ಓ ಅದಾ ಕುಸಿ ಅನಸ್ತದೆ…ನಾನೂ ದೋನಿ ಅಣ್ಣಂಗೆ ಹೇಳಿದ್ದೆ… ನೋಡಪಾ ಅಣ್ಣ… ಇದೊಂದು ಮ್ಯಾಚು ಅಂತ…
ಕುಸ್ಮಿಕಾ; ನಿಮ್ಮನೆಯವರು ಮೈದಾನದಲ್ಲಿ ಭಾರೀ ಹಾರಾಡ್ತಾರೆ…
ಅನುಸ್ಕಾ: ನನ್ನ ಮುಂದೆ ಹಾರಾಡೋಕೆ ಆಗಲ್ವಲ್ಲ ಅದಕ್ಕೆ
ಕುಸ್ಮಿಕಾ; ನೀವು ಇಲ್ಲಿಗೆ ಬಂದಾಗ ಮಕ್ಕಳು ಮೇಡಂ?
ಅನುಸ್ಕಾ; ಅವರಜ್ಜಿ ಮನೇಲೆ ಇರ್ತವೆ…ಆಮೇಲೆ ವಿಡಿಯೋ ಕಾಲ್‌ಮಾಡ್ತೀವಿ…
ಕುನಿಸ್ಕಾ; ಮುಂದಿನ ಮ್ಯಾಚುಗಳು ಹೇಗೆ ಮೇಡಂ…?
ಅನುಸ್ಕಾ..ಎಲ್ಲ ಗೆಲ್ತಾರೆ…ನಾ ಹೋದರೆ ಮಾತ್ರ…ಕೇಳಿ ಬೇಕಾರೆ ಇರಾಟನಿಗೆ …
ಕುನಿಸ್ಕಾ; ಆಯ್ತು ಮೇಡಂ ಹೋಗ್ಬನ್ನಿ…