ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಾಮು ಮಕ್ಕಳ ಕಟಿಂಗ್ ಕಾಳಗ

02:30 AM May 29, 2024 IST | Samyukta Karnataka

ಮಾಮುನ ಮಗ ಮತ್ತು ಇನ್ನೊಬ್ಬ ಮಾಮುನ ಮಗನ ಕಟಿಂಗ್ ಜಗಳ ಎಲ್ಲೆಲ್ಲಿಗೋ ಹೋಗುತ್ತಿದೆ. ಕಟಿಂಗ್ ಕಟಿಂಗ್ ಮಾಡಿಸಿಕೋ ಅಂದರೆ ನೀನೇ ಮಾಡು ಬಾ ಅಂತಾರಂತೆ… ಅವರೇ ಕಟಿಂಗ್ ಮಾಡಿಕೊಂಡು ನಮ್ಮ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಕಟಿಂಗ್‌ರಾಮುಡು ಭಯಂಕರ ಸಿಟ್ಟಾಗಿದ್ದಾರೆ. ಅವರವರೇ ಕಟಿಂಗ್ ಮಾಡಿಸಿಕೊಳ್ಳಲು ಮುಂದಾದರೆ ನಾವೇನು ಮಾಡಬೇಕು.. ಅಷ್ಟೂ……. ಇಲ್ಲವೇ ಇವರಿಗೆ? ನಾವು ಅಂಗಡಿಯನ್ನು ಬಾಡಿಗೆ ತೆಗೆದುಕೊಂಡು ಅಂಗಡಿ ತುಂಬಾ ಕನ್ನಡಿ ಹಾಕಿ..ಪಾಂಡ್ಸ್ ಪೌಡರ್, ಸ್ನೋ, ವಿಧವಿಧ ಬಾಚಣಿಕೆ ಎಲ್ಲವನ್ನೂ ಇಟ್ಟು ಕಟಿಂಗ್‌ಗೆ ಬನ್ರೋ ಎಂದರೆ ಜನರು ಬರುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಆದರೆ ಈ ಮಾಮು ಮಕ್ಕಳು ಮಾತ್ರ ನಾ ಕಟಿಂಗ್ ಮಾಡು..ನೀ ಕಟಿಂಗ್ ಮಾಡು ಎಂದು ಮಾತಾಡುತ್ತಾರೆ ಒಂದು ವೇಳೆ ಅವರವರೇ ಕಟಿಂಗ್ ಮಾಡಲು ಮುಂದಾದರೆ ನಾನಂತೂ ಸುಮ್ಮನಿರುವುದಿಲ್ಲ, ಅವರ ಮನೆಮುಂದೆ ಕಟಿಂಗ್ ಸಾಮಗ್ರಿಗಳನ್ನು ಇಟ್ಟುಕೊಂಡು ಉಪವಾಸ ಕೂಡುತ್ತೇನೆ. ಈಗಿನಿಂದಲೇ ನಾವು ಒಗ್ಗಟ್ಟಾಗಿ ಇದನ್ನು ವಿರೋಧಿಸಬೇಕು ಇಲ್ಲದಿದ್ದರೆ ನಮ್ಮ ಹೊಟ್ಟೆಗೆ ತಣ್ಣೀರು ಪಟ್ಟಿ ಗ್ಯಾರಂಟಿ ಎಂದು ಅಂದುಕೊಂಡ. ಕೂಡಲೇ ತನ್ನ ಗೆಳೆಯ ಬಾರಿಡೊಗ್ಗಿ ಭಾಷನಿಗೆ ಅರ್ಜಂಟ್ ಬಾ ಎಂದು ವಾಟ್ಸಪ್ ಕಳುಹಿಸಿದ. ಅದನ್ನು ನೋಡಿ ಆತ ತಡಬಡಿಸಿ ಓಡಿ ಬಂದು ಏನು ಅಂತ ಕೇಳಿದ. ನೋಡು ಮಾಮುನ ಮಕ್ಕಳು ಇಂಗಿಂಗೆ…ನೀವೇ ಕಟಿಂಗ್ ಮಾಡಿ ಅನ್ನುತ್ತಿದ್ದಾರೆ…ಅವರವರೇ ಮಾಡಿಕೊಂಡರೆ ನಮ್ಮ ಗತಿ ಏನು? ನಾನು ಸುಮ್ಮನೆ ಕೂಡುವುದಿಲ್ಲ ನೀನು ನನ್ನ ಜತೆ ಇರಬೇಕು ಅಂದಾಗ…ಬಾರಿಡೊಗ್ಗಿ ನನಗೇನು ಸಂಬಂಧವಿಲ್ಲಪ್ಪ ಅಂದ. ಯಾಕೆ ಅಂತ ಕೇಳಿದರೆ ನನಗೆ ೨೦ನೇ ವಯಸ್ಸಿಗೆ ತಲೆಯಲ್ಲಿನ ಎಲ್ಲ ಕೂದಲೂ ಉದುರಿಹೋಗಿವೆ. ಈಗ ಒಂದೂ ಕೂದಲು ಇಲ್ಲ. ಅಂದ ಮೇಲೆ ನಾನ್ಯಾಕೆ ತಲೆಕೆಡೆಸಿಕೊಳ್ಳಲಿ? ಎಂದು ಹೇಳಿದ. ಇದು ಸರಿಹೋಗುವ ಮಾತಲ್ಲ…ನಾನು ಸುಮ್ಮನೇ ಕೂಡುವುದಿಲ್ಲ. ಕೂಡಲೇ ಸೋದಿ ಮಾಮಾನಿಗೆ ಕಾಲ್ ಮಾಡುತ್ತೇನೆ….ಎಂದು ಮಾಮಾನಿಗೆ ಕರೆ ಮಾಡಿ…ಹಲೋ ಮಾಮೋರೆ..ಮಾಮೋರೆ…ನಾನು ಕಟಿಂಗ್ ರಾಮುಡು ಅಂದಾಗ…ಆ ಕಡೆಯಿಂದ ನಹೀ…ನಹೀ…ಕಟಿಂಗ್ ಹುವಾ ಮೇರಾ….ರಕ್ತಾಹೂಂ…ಎಂದು ಕರೆ ಕಟ್ ಮಾಡಿದರು.

Next Article