ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೆಣ್ ಕಪ್ ನಮ್ದೇ… ಗಂಡ್ ಕಪ್ಪೂ ನಮ್ದೇ…

02:30 AM Mar 22, 2024 IST | Samyukta Karnataka

ಬರುತ್ತೇನೆ ಎಂದು ಅನುಷ್ಕಾ-ಬೇಡ ಎಂದು ವಿರಾಟ ಅವರಿಬ್ಬರೂ ಊರ ಮಂದಿಗೆ ಕೇಳುವ ಹಾಗೆ ಬಾಯಿ ಮಾಡಿ ಜಗಳವಾಡುತ್ತಿದ್ದಾರೆ. ಬೇಡ.. ಅಲ್ಲಿ ಸಿಕ್ಕಾಪಟ್ಟೆ ರಷ್ಯು… ಆಮೇಲೆ ಸುಮ್ನೆ ಅರಾಮಿಲ್ಲದ ಹಾಗೆ ಆಗುತ್ತದೆ ಎಂದು ವಿರಾಟ ಪರಿಪರಿಯಿಂದ ಹೇಳುತ್ತಿದ್ದಾನೆ. ಇಲ್ಲಿಲ್ಲ ನಾ ಬಂದರೆ ಐಪಿಎಲ್‌ಗೆ ಲಕ್ಕು… ನೀ ಬಂದಿದ್ದಕ್ಕೆ ಮ್ಯಾಚು ಗೆದ್ದಿದೆ.. ನಿನ್ನ ಕಾಲ್ಗುಣ ಫಸ್ಟ್‌ಕ್ಲಾಸ್ ಇದೆ ನೋಡು ಎಂದು ನೀನೇ ಹೇಳಿದ್ದೆ ಇಷ್ಟು ಬೇಗ ಮರ್ತಬಿಟ್ಟಿ ಎಂದು ಮುಖ ಉಬ್ಬಿಸಿಕೊಂಡು ಹೇಳಿದಳು. ಹಾಗಲ್ಲ… ಅವತ್ತಿನ ಪರಿಸ್ಥಿತಿಯೇ ಬೇರೆ ಇತ್ತು. ಈಗ ಬೇರೆ ಇದೆ ಎಂದು ಹೇಳಿದಾಗ… ನೋಡು ವಿರಾಟ… ಆ ಹೆಣ್ಮಕ್ಳು ಗೆದ್ದು ಕುಣಿತಾವೆ… ಎಲ್ಲೆಡೆಯೂ ಈ ಬಾರಿ ಹೆಣ್ ಕಪ್ಪು ನಮ್ದೇ-ಗಂಡ್ ಕಪ್ಪೂ ನಮ್ದೇ ಎಂದು ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಬಾರಿ ಕಪ್ ಗೆಲ್ಲದಿದ್ದರೆ ಎಲ್ಲವೂ ನಿನ್ನ ಮೇಲೆಯೇ ಬರುತ್ತದೆ. ನಾನು ಬಂದರೆ… ನನ್ನ ಕಾಲ್ಗುಣದಿಂದ ಎಲ್ಲ ಮ್ಯಾಚೂ ಗೆದ್ದರೆ ಮರ್ಯಾದೆ ಉಳಿಯುತ್ತದೆ. ಇಲ್ಲದಿದ್ದರೆ ನೋಡು ಆ ಹೆಣ್ಣುಡ್ರು ಗೆದ್ದವು. ಇವಕ್ಕೇನಾಗಿತ್ತು ಧಾಡಿ ಅಂತ ಅನಿಸಿಕೊಳ್ಳುವುದು ಬೇಡ ಎಂದು ನನ್ನ ಆಸೆ. ಎಂದು ಹೇಳಿದಳು. ಅದಕ್ಕೆ ವಿರಾಟ… ಅದಕ್ಕಲ್ಲ ನಾ ಹೇಳಿದ್ದು…. ನೀನು ಎರಡೂ ಮಕ್ಕಳನ್ನು ಕರೆದುಕೊಂಡು ಅಲ್ಲಿ ತಾಸುಗಟ್ಟಲೇ ಕುಳಿತರೆ ಸುಮ್ಮನೇ ಸಮಸ್ಯೆ ಎಂದು ವಿರಾಟ ರಮಿಸಿ ಹೇಳಿದರೂ ಅನುಷ್ಕಾ ಸಿಟ್ಟು ಇಳಿಯುತ್ತಿರಲಿಲ್ಲ. ಅವರ ಮನೆ ಮುಂದಿನಿಂದ ಹೊರಟಿದ್ದ ಕರಿಭಾಗೀರತಿ ಒಳಗೆ ಇಷ್ಟು ಜೋರು ಬಾಯಿ ಕೇಳುತ್ತಿದೆ ಎಂದು ಬಾಗಿಲ ಬಳಿ ಬಂದು ಸ್ವಲ್ಪ ಹೊತ್ತು ನಿಂತಳು. ನಂತರ ಮೆಲ್ಲಗೇ ಕಿಟಕಿ ಹತ್ತಿರ ಹೋಗಿ ಸಣ್ಣ ಕಟ್ಟಿಗೆಯಿಂದ ಕಿಟಕಿಬಾಗಿಲನ್ನು ದೂಡಿ ಒಳಗಿನ ದೃಶ್ಯ ನೋಡಿದಳು. ಸುಮ್ಮನೇ ಇವು ಜಗಳವಾಡುತ್ತಿವೆ. ಮೊನ್ನಿನವರೆಗೆ ಇವರಿಬ್ಬರೂ ಮಂದಿ ಜಗಳವಾಡುತ್ತಿದ್ದರೆ ನಿಂತು ನೋಡುತ್ತಿದ್ದರು. ಈಗ ಅವರು ಜಗಳವಾಡುವುದನ್ನು ಊರಮಂದಿ ನೋಡುತ್ತಿದ್ದಾರೆ.. ಎಂದು ಅಂದುಕೊಂಡು ಗಟ್ಟಿಧೈರ್ಯ ಮಾಡಿ ಬಾಗಿಲು ಬಡಿದಳು. ಸ್ವಲ್ಪ ಹೊತ್ತು ಮಾತು ನಿಂತು…. ಆಮೇಲೆ ಮೆಲ್ಲನೆ ಬಾಗಿಲನ್ನು ತೆಗೆದಾಗ.. ವಿರಾಟ-ಅನುಷ್ಕಾ ಭುಸುಗುಡುತ್ತ ನಿಂತರು. ಯಾಕೆ ಹೀಗೆ ಜಗಳ? ಎಂದು ಕೇಳಿದ್ದೇ ತಡ… ಅಯ್ಯೋ ಭಾಗೀರತಿಯವರೇ… ಈ ಹಿಂದೆ ನಿನ್ನ ಕಾಲ್ಗುಣ ಇದ್ದಂಗೆ ಯಾರದ್ದೂ ಇಲ್ಲ. ನೀನು ಎಲ್ಲ ಆರ್‌ಸಿಬಿ ಮ್ಯಾಚಿಗೆ ಬಾ ಎಂದು ಕರೆಯುತ್ತಿದ್ದರು. ಈಗ ಮತ್ತೆ ಮ್ಯಾಚುಗಳು ನಡೆಯುತ್ತಿವೆ. ಈಗ ನಾನು ಬರುತ್ತೇನೆ ಎಂದರೆ ಬೇಡ ಅನ್ನುತ್ತಿದ್ದಾರೆ. ಇದು ಯಾವ ನ್ಯಾಯ ನೀನೇಹೇಳು ಅಂದಳು. ಅಲ್ಲಿಯೇ ಇದ್ದ ವಿರಾಟ.. ಅಯ್ಯೋ ಅದಕ್ಕಲ್ಲರೀ ನಾ ಹೇಳೋದು… ನಾನು ಯಾತಕ್ಕೆ ಬೇಡ ಅಂದಿದ್ದೇನೆ ಕೇಳಿ ಅಂದ. ಎರಡೂ ಕಡೆಯ ವಾದ ಆಲಿಸಿದ ಭಾಗೀರತಿ… ಒಂದು ಕೆಲಸ ಮಾಡು… ಈಕೆ ಕೇವಲ ನಿನ್ನ ಮ್ಯಾಚಿಗಷ್ಟೇ ಬರಲಿ… ನಾನು ಎಲ್ಲ ಮ್ಯಾಚಿಗೂ ಬರುತ್ತೇನೆ..

Next Article