For the best experience, open
https://m.samyuktakarnataka.in
on your mobile browser.

ಕಾರ್ತಿಕ ಏಕಾದಶಿ: ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು

09:21 PM Nov 08, 2024 IST | Samyukta Karnataka
ಕಾರ್ತಿಕ ಏಕಾದಶಿ  ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು

ಹುಬ್ಬಳ್ಳಿ: ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ಆರು ಟ್ರಿಪ್‌ಗಳಿಗೆ ಕಾಯ್ದಿರಿಸದ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲಿದೆ.
ವಿವರಗಳು ಈ ಕೆಳಗಿನಂತಿವೆ:
ಎಸ್‌ಎಸ್‌ಎಸ್ ಹುಬ್ಬಳ್ಳಿ-ಪಂಢರಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ( ರೈಲು ಸಂಖ್ಯೆ ೦೭೩೧೩/೦೭೩೧೪ ) ಕಾಯ್ದಿರಿಸದ ವಿಶೇಷ ರೈಲು (೬ ಟ್ರಿಪ್‌ಗಳು)
ರೈಲು ಸಂಖ್ಯೆ ೦೭೩೧೩ ಎಸ್‌ಎಸ್‌ಎಸ್ ಹುಬ್ಬಳ್ಳಿ-ಪಂಢರಪುರ ಕಾಯ್ದಿರಿಸದ ವಿಶೇಷ ರೈಲು ನವೆಂಬರ್ ೯ ರಿಂದ ೧೫ರವರೆಗೆ (ನವೆಂಬರ್ ೧೩ ಹೊರತುಪಡಿಸಿ) ಪ್ರತಿದಿನ ಸಂಜೆ ೭:೪೫ ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ ೪.೩೦ ಕ್ಕೆ ಪಂಢರಪುರ ತಲುಪಲಿದೆ.
ವಾಪಸು ಪಂಢರಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ (ರೈಲು ಸಂಖ್ಯೆ ೦೭೩೧೪ ) ಕಾಯ್ದಿರಿಸದ ವಿಶೇಷ ರೈಲು ನವೆಂಬರ್ ೧೦ ರಿಂದ ೧೬ರವರೆಗೆ (ನವೆಂಬರ್ ೧೪ ಹೊರತುಪಡಿಸಿ) ಪ್ರತಿದಿನ ಬೆಳಿಗ್ಗೆ ೬:೦೦ ಗಂಟೆಗೆ ಪಂಢರಪುರದಿಂದ ಹೊರಟು ಅದೇ ದಿನ ಸಂಜೆ ೪:೩೦ ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಎರಡೂ ಮಾರ್ಗಗಳಲ್ಲಿ, ಈ ರೈಲು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ, ಶೇಡಬಾಳ, ವಿಜಯನಗರ, ಮೀರಜ್, ಸುಲ್ಗರೆ, ಕವಠೆ-ಮಹಾಂಕಾಲ್, ಧಲಗಾಂವ್, ಜತ್ ರೋಡ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲಿನಲ್ಲಿ ೧೦ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಗಳು ಸೇರಿದಂತೆ ಒಟ್ಟು ೧೨ ಬೋಗಿಗಳು ಇರಲಿವೆ.
ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ೧೩೯ ಸಹಾಯವಾಣಿ ನಂಬರಗೆ ಡಯಲ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.