ಕೀ ಉತ್ತರಗಳೇ ದೋಷಪೂರಿತ…
ವಿಷಯದ ತಜ್ಞರೊಂದಿಗೆ ಚರ್ಚಿಸಿ ನಂತರ ಪ್ರೂಫ್ ರೀಡ್ ಮಾಡಿ ಬಿಡುಗಡಗೊಳಿಸಲು ಬದಲಾಗಿ ದೋಷಪೂರಿತ ಕೀ ಉತ್ತರ ಪ್ರಕಟ ಮಾಡಿರುವುದು ಖಂಡನೀಯ
ಬೆಂಗಳೂರು: Village accountant ಪರೀಕ್ಷೆ ನಡೆಸಿದಂತ KEA ಇಂದು ಕೀ ಉತ್ತರಗಳನ್ನು ಹೊರಡಿಸಿರುತ್ತೀರಿ ನೀವು ಹೊರಡಿಸಿರುವ ಕೀ ಉತ್ತರಗಳು ದೋಷಪೂರಿತವಾಗಿವೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅತ್ಯಂತ ವೃತ್ತಿಪರವಾಗಿ, ಪರೀಕ್ಷಾರ್ಥಿಗಳ ಪರವಾಗಿ, ಯಾವುದೇ ತಪ್ಪು/ದೋಷಗಳಿಗೆ ಆಸ್ಪದ ಕೊಡದೆ ಕೆಲಸ ಮಾಡಬೇಕಾಗಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಲೇಜ್ ಅಕೌಂಟೆಂಟ್ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳಿಗೆ ಬಿಡುಗಡೆಗೊಳಿಸಿದ ಕೀ ಉತ್ತರಗಳು ದೋಷಪೂರಿತವಾಗಿದೆ/ತಪ್ಪಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಬಿಡುಗಡೆ ಮಾಡುವ ಮೂಲಕ ಪ್ರಶ್ನೆ - ಉತ್ತರ ಎರಡು ತಾಳೆಮಾಡಿಕೊಂಡು, ವಿಷಯದ ತಜ್ಞರೊಂದಿಗೆ ಚರ್ಚಿಸಿ ನಂತರ ಪ್ರೂಫ್ ರೀಡ್ ಮಾಡಿ ಬಿಡುಗಡಗೊಳಿಸಲು ಬದಲಾಗಿ ದೋಷಪೂರಿತವಾಗಿ ಕೀ ಉತ್ತರ ಪ್ರಕಟ ಮಾಡಿರುವುದು ನಿಜಕ್ಕೂ ಖಂಡನೀಯ. ಇದು ಪರೀಕ್ಷಾರ್ಥಿಗಳಿಗೆ ಮಾಡಿದ ಅನ್ಯಾಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಕಡ್ಡಾಯ ರಜೆಗೆ ಕಳುಹಿಸಿ ಆಗಿರುವ ತಪ್ಪನ್ನು ಸರಿಪಡಿಸಲಿ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಸ್ವಲ್ಪವಾದರೂ ಉತ್ತರದಾಯಿಗಳಾಗಲಿ.