ಕುಂಭಮೇಳಕ್ಕೆ ವಿಶೇಷ ಏಕಮುಖ ರೈಲು
ಹುಬ್ಬಳ್ಳಿ : ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರಿನಿಂದ ಪ್ರಯಾಗ್ ರಾಜ್ ಗೆ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು (06215) ಓಡಿಸಲಿದೆ.
ರೈಲು ಸಂಖ್ಯೆ 06215 ಮೈಸೂರು-ಪ್ರಯಾಗ್ ರಾಜ್ ಒನ್-ವೇ ಕುಂಭ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 23 ರಂದು(ಸೋಮವಾರ) 00:30 ಗಂಟೆಗೆ ಮೈಸೂರಿನಿಂದ ಹೊರಟು, ಬುಧವಾರ 3 ಗಂಟೆಗೆ ಪ್ರಯಾಗ್ ರಾಜ್ ಜಂಕ್ಷನ್ ತಲುಪಲಿದೆ.
ಮಾರ್ಗಮಧ್ಯದಲ್ಲಿ, ಈ ರೈಲು ಮಂಡ್ಯಾ, ಕೆಎಸ್ಆರ್. ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು,ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಚೋರ್ಡ್ ಲೈನ್, ಅಹ್ಮದ್ನಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬನಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲಿನ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್ಸೈಟ್ಗೆ (www.enquiry.indianrail.gov.in) ಭೇಟಿ ನೀಡಿ, 139 ನಂಬರಗೆ ಡಯಲ್ ಮಾಡಿ ಅಥವಾ NTES ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.