ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕುಂಭಮೇಳಕ್ಕೆ ವಿಶೇಷ ರೈಲುಗಳು

09:49 PM Jan 19, 2025 IST | Samyukta Karnataka

ಹುಬ್ಬಳ್ಳಿ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯ ಹೋಗಲಾಡಿಸಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ರೈಲುಗಳು ಯಾತ್ರಾರ್ಥಿಗಳಿಗೆ ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ. ಸಾಂಗ್ಲಿ, ಕಿರ್ಲೋಸ್ಕರವಾಡಿ ಮತ್ತು ಕರಾಡ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಹೊಂದಿವೆ.
೧. ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು
ರೈಲು ಸಂಖ್ಯೆ ೦೭೩೭೯ ಎಸ್‌ಎಸ್‌ಎಸ್ ಹುಬ್ಬಳ್ಳಿ-ತುಂಡ್ಲಾ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ ೨೦ ರಂದು (ಸೋಮವಾರ) ೦೦:೪೫ ಗಂಟೆಗೆ ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು, ಜನವರಿ ೨೨ ರಂದು (ಬುಧವಾರ) ೦೨:೩೦ ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
ತುಂಡ್ಲಾ-ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ ೦೭೩೮೦) ಜನವರಿ ೨೩ರಂದು (ಗುರುವಾರ) ೧೬:೦೦ ಗಂಟೆಗೆ ತುಂಡ್ಲಾದಿಂದ ಹೊರಟು, ಜನವರಿ ೨೫ರಂದು (ಶನಿವಾರ) ೧೮:೪೦ ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

೨. ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು (೦೭೩೮೧/೦೭೩೮೨) ಸಂಚಾರ ಎಸ್‌ಎಸ್ ಹುಬ್ಬಳ್ಳಿ-ತುಂಡ್ಲಾ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೦೭೩೮೧) ಫೆಬ್ರುವರಿ ೬ ರಂದು (ಗುರುವಾರ) ೨೦:೧೦ ಗಂಟೆಗೆ ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು, ಫೆಬ್ರುವರಿ ೮ ರಂದು (ಶನಿವಾರ) ೨೦:೧೫ ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
ತುಂಡ್ಲಾ-ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೦೭೩೮೨) ಫೆಬ್ರುವರಿ ೯ ರಂದು (ಭಾನುವಾರ) ೧೬:೨೦ ಗಂಟೆಗೆ ತುಂಡ್ಲಾದಿಂದ ಹೊರಟು, ಫೆಬ್ರುವರಿ ೧೧ ರಂದು (ಮಂಗಳವಾರ) ೧೮:೪೦ ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

Next Article