ಕುಮಟಾದಲ್ಲಿ ಭಾರಿ ಮಳೆ : ಮತ ಏಣಿಕಾ ಕೇಂದ್ರಗಳಿಗೆ ತೆರಳಲು ಅಧಿಕಾರಿಗಳ ಪರದಾಟ
ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮತ ಏಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಕುಮಟಾದಲ್ಲಿ ತಡರಾತ್ರಿಯಿಂದಲೇ ಮಳೆ ಅಬ್ಬರ ಜೋರಾಗಿದ್ದು ಮತ ಏಣಿಕಾ ಕೇಂದ್ರಗಳತ್ತ ಆಗಮಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಏಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಮತಪೆಟ್ಟಿಗೆಗಳನ್ನು ಕುಮಟಾದ ಡಾ. ಎ.ವಿ ಬಾಳಿಗಾ ಕಾಲೇಜಿನಲ್ಲಿ ಇರಿಸಲಾಗಿತ್ತು. ಇದೀಗ ಚುನಾವಣಾಧಿಕಾರಿಗಳು ಹಾಗೂ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ವರೂಮ್ ಗಳನ್ನು ಓಪನ ಮಾಡಿದ್ದು ಮತ ಏಣಿಕೆಗೆ ಮತಯಂತ್ರಗಳನ್ನು ಮತ ಏಣಿಕಾ ಕೊಠಡಿಗಳಿಗೆ ಕೊಂಡೊಯ್ಯಲಾಗುತ್ತಿದೆ. ಇನ್ನು ಮತ ಏಣಿಕಾ ಕೇಂದ್ರದ ಸುತ್ತ ಮೂರು ಸುತ್ತಿನ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇನ್ನು ಜಿಲ್ಲೆಯ ಕುಮಟಾದಲ್ಲಿ ತಡರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿದ್ದು ಮತ ಏಣಿಕಾ ಕೇಂದ್ರಗಳಿಗೆ ಆಗಮಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಳೆ ಅಡ್ಡಿಯಾಗಿದೆ. ಮತ ಏಣಿಕಾ ಕೇಂದ್ರಗಳಿಗೆ ಆಗಮಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ತಪಾಸಣೆ ನಡೆಸಿ ಮತ ಏಣಿಕಾ ಕೇಂದ್ರಕ್ಕೆ ಬೀಡಲಾಗುತ್ತಿದೆ. ಆದರೆ ನೂರಾರು ಸಂಖ್ಯೆಯಲ್ಲಿ ಮತ ಏಣಿಕಾ ಸಿಬ್ಬಂದಿ ಇರುವ ಕಾರಣ ಮಳೆಯಲ್ಲಿಯೇ ನಿಂತು ತಪಾಸಣೆಗೆ ಸರದಿ ಸಾಲಿನಲ್ಲಿ ತೆರಳುತ್ತಿದ್ದಾರೆ.