For the best experience, open
https://m.samyuktakarnataka.in
on your mobile browser.

ಕುವೈತ್ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

11:18 PM Jun 13, 2024 IST | Samyukta Karnataka
ಕುವೈತ್ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

ಕಲಬುರಗಿ: ಕುವೈತ್‌ ಅಗ್ನಿ ದುರಂತದಲ್ಲಿ ಭಾರತೀಯ ಮೂಲದ 40 ಜನ ಸಾವು ಪ್ರಕರಣ ಕಲಬುರಗಿ ಮೂಲದ ಓರ್ವ ವ್ಯೆಕ್ತಿ ಸಾವಿಗೀಡಾಗಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ನಿವಾಸಿ ವಿಜಯಕುಮಾರ್ (40) ಮೃತಪಟ್ಟ ನತದೃಷ್ಟವೆಂದು ತಿಳಿದು ಬಂದಿದೆ. ಕುವೈತ್‌ನಲ್ಲಿ ಟ್ರಕ್ ಡ್ರೈವರ್ ಆಗಿ ಕಳೆದ 10 ವರ್ಷಗಳಿಂದ ಕೆಲಸ ಮಾಡ್ತಿದ್ದ ವಿಜಯಕುಮಾರ್ ಒಂದು ವರ್ಷದ ಹಿಂದೆ ಕಲಬುರಗಿಗೆ ಬಂದು ಹೋಗಿದ್ದರು. ವಿಜಯಕುಮಾರ್ ಪತ್ನಿ ಮೂವರು ಮಕ್ಕಳು ತಾಯಿ ಸರಸಂಬಾ ಗ್ರಾಮದಲ್ಲೇ ವಾಸವಾಗಿದ್ದಾರೆ.
ನಾಳೆ ಕೊಚ್ಚಿಗೆ ಆಗಮಿಸಲಿರುವ ವಿಜಯಕುಮಾರ್ ಪಾರ್ಥಿವ ಶರೀರವನ್ನು ಕೊಚ್ಚಿಯಿಂದ ಕಲಬುರಗಿಗೆ ಶವ ತರಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.