For the best experience, open
https://m.samyuktakarnataka.in
on your mobile browser.

ಕುವೈತ್‌ ಬೆಂಕಿ ಅವಘಡ: ಭಾರತೀಯರು ಸೇರಿ 35 ಮಂದಿ ಸಾವು

03:41 PM Jun 12, 2024 IST | Samyukta Karnataka
ಕುವೈತ್‌ ಬೆಂಕಿ ಅವಘಡ  ಭಾರತೀಯರು ಸೇರಿ 35 ಮಂದಿ ಸಾವು

ಕುವೈತ್‌: ಕುವೈತ್​ನಲ್ಲಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 35 ಮಂದಿ ಸಜೀವದಹನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಮೃತರಲ್ಲಿ ನಾಲ್ವರು ಭಾರತೀಯರಾಗಿದ್ದಾರೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಅವಘಡ ಸಂಭವಿಸಿದೆ, ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ.
ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡವೊಂದರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿರುವ ಘಟನೆ ದಕ್ಷಿಣ ಕುವೈತ್‌ ನ ಅಹ್ಮದಿ ಗವರ್ನರೇಟ್‌ ನ ಮಂಗಫ್‌ ಬ್ಲಾಕ್‌ ನಲ್ಲಿ ನಡೆದಿದೆ.