For the best experience, open
https://m.samyuktakarnataka.in
on your mobile browser.

ಕೂಪನ್ ಸಲ್ಲಿಸಲು ಫೆ. ೫ ಕೊನೆ ದಿನ

09:32 PM Jan 30, 2024 IST | Samyukta Karnataka
ಕೂಪನ್ ಸಲ್ಲಿಸಲು ಫೆ  ೫ ಕೊನೆ ದಿನ

ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ ತನ್ನ ಓದುಗರಿಗಾಗಿ ಮಕರ ಸಂಕ್ರಮಣ ಪ್ರಯುಕ್ತ ಪ್ರತಿಷ್ಠಿತ ಗಂಗಾವತಿ ಸಿಲ್ಕ್ ಪ್ಯಾಲೇಸ್ ಸಹಯೋಗದಲ್ಲಿ ಆಯೋಜಿಸಿರುವನೀರೆ ನಿನಗೊಂದು ಅಂದದ ರೇಷ್ಮೆ ಸೀರೆ' ಯೋಜನೆಯ ಕೂಪನ್‌ಗಳನ್ನು ಫೆಬ್ರುವರಿ ೫ ರೊಳಗೆ ಸಲ್ಲಿಸಬೇಕು.
ಜನವರಿ ೧ ರಿಂದ ಜ.೩೦ ರವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಕೂಪನ್‌ಗಳಲ್ಲಿ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್‌ಗಳನ್ನು ತುಂಬಿ ಒಟ್ಟು ೩೦ ದಿನದ ಕೂಪನ್‌ಗಳನ್ನು ಸಂಯುಕ್ತ ಕರ್ನಾಟಕ ಕಚೇರಿಯಲ್ಲಿಟ್ಟಿರುವ ಬಾಕ್ಸ್ನಲ್ಲಿ ಫೆಬ್ರುವರಿ ೫ ರೊಳಗೆ ಹಾಕಬೇಕು. ಲಕ್ಕಿ ಡ್ರಾ ಮೂಲಕ ಆಯ್ದ ೨೫ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಗಂಗಾವತಿ ಸಿಲ್ಕ್ ವತಿಯಿಂದ ಸೀರೆ ನೀಡಲಾಗುವುದು.

ಯೋಜನೆ ಮುಂದುವರಿಕೆ
ಈ ಯೋಜನೆ ಫೆಬ್ರುವರಿ ತಿಂಗಳಲ್ಲೂ ಮುಂದುವರೆಯಲಿದ್ದು, ಓದುಗರು ಫೆ. ೧ರಿಂದ ಫೆ. ೨೯ ರವರೆಗೆ ಕೂಪನ್ ಸಂಗ್ರಹಿಸಿ ಅದೃಷ್ಟಶಾಲಿಗಳಾಗಬಹುದು.