For the best experience, open
https://m.samyuktakarnataka.in
on your mobile browser.

ಕೆಲ ರೈಲು ತಾತ್ಕಾಲಿಕ, ಭಾಗಶಃ ರದ್ದು

09:10 PM Apr 01, 2024 IST | Samyukta Karnataka
ಕೆಲ ರೈಲು ತಾತ್ಕಾಲಿಕ  ಭಾಗಶಃ ರದ್ದು

ಹುಬ್ಬಳ್ಳಿ: ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಕೆಲವು ರೈಲುಗಳನ್ನು ತಾತ್ಕಾಲಿಕ ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ ಮಾಡಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ಹುಬ್ಬಳ್ಳಿ-ಬೆಂಗಳೂರು(೦೭೩೩೯), ಬೆಂಗಳೂರು-ಹುಬ್ಬಳ್ಳಿ(೦೭೩೪೦) ರೈಲು ಸಂಚಾರ ಏ. ೬ ಮತ್ತು ೭ರಂದು ರದ್ದುಪಡಿಸಲಾಗಿದೆ. ಅದೇ ರೀತಿ ಬೆಂಗಳೂರು-ಮೈಸೂರು(ಮೆಮೂ ಸ್ಪೆಷಲ್) (೦೬೨೫೫), ಮೈಸೂರು-ಬೆಂಗಳೂರು(೦೬೫೬೦) ರೈಲು ಸಂಚಾರವನ್ನು ಏ. ೭ ಮತ್ತು ೮ರಂದು ರದ್ದುಪಡಿಸಲಾಗಿದೆ.
ಕನ್ನೂರು-ಬೆಂಗಳೂರು(೧೬೫೧೨), ಹೊಸಪೇಟೆ-ಬೆಂಗಳೂರು (೦೬೨೪೪) ಏ. ೭ ಮತ್ತು ೮ರಂದು ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಕೇಂದ್ರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
ಬೆಂಗಳೂರು-ಹುಬ್ಬಳ್ಳಿ (೧೭೩೯೧) ಏ. ೮ ಮತ್ತು ೯ರಂದು ಕೆಎಸ್‌ಆರ್ ಬೆಂಗಳೂರು-ಯಶವಂತಪುರ ನಡುವೆ ಹಾಗೂ ಹುಬ್ಬಳ್ಳಿ-ಬೆಂಗಳೂರು(೧೭೩೯೨) ರೈಲು ಏ. ೭ ಮತ್ತು ೮ರಂದು ಭಾಗಶಃ ರದ್ದುಪಡಿಸಲಾಗಿದೆ. ಅದೇ ರೀತಿ ಬೆಂಗಳೂರು-ಹೊಸಪೇಟೆ (೦೬೨೪೩) ರೈಲು ಏ. ೮ ಮತ್ತು ೯ರಂದು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ.
ಅಜ್ಮೀರ್-ಮೈಸೂರು(೧೬೨೦೯) ರೈಲು ಏ. ೭ರಂದು ತಿಪಟೂರು ಮಂಡ್ಯ ನಡುವೆ ನಿಲುಗಡೆ ಮಾರ್ಗ ಬದಲಾಯಿಸಿ ಅರಸಿಕೇರಿ, ಹಾಸನ ಮತ್ತು ಮೈಸೂರು ಮಾರ್ಗವಾಗಿ ಸಂಚರಿಸಲಿದೆ. ತಾಳಗುಪ್ಪ-ಮೈಸೂರು(೧೬೨೨೮) ರೈಳು ಏ. ೭ ಮತ್ತು ೮ರಂದು ತಿಪಟೂರು ಮತ್ತು ನಾಯಂಡನಹಳ್ಳಿ ಮಾರ್ಗ ಬದಲು ಅರಸಿಕೇರಿ, ಹಾಸನ ಮತ್ತು ಮೈಸೂರು ಮಾರ್ಗವಾಗಿ ಸಂಚರಿಸಲಿದೆ.
ಹಜರತ್ ನಿಜಾಮುದ್ದೀನ್-ಕೆಎಸ್‌ಆರ್ ಬೆಂಗಳೂರು-ರಾಜಧಾನಿ ಎಕ್ಸಪ್ರೆಸ್(೨೨೬೯೨) ರೈಲು ಏ. ೬ರಂದು ೨೦ ನಿಮಿಷ, ಏ. ೭ರಂದು ೧೨೦ ನಿಮಿಷ ನಿಯಂತ್ರಣಗೊಳಿಸಲಾಗುವುದು. ಹುಬ್ಬಳ್ಳಿ-ಮೈಸೂರು (೧೬೫೯೧) ಎಕ್ಸ್ಪ್ರೆಸ್ ರೈಲು ಏ. ೭ರಂದು ೧೦ ನಿಮಿಷ, ಸಾಂಗ್ಲಿ-ಕೆಎಸ್‌ಆರ್ ಬೆಂಗಳೂರು-ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು(೧೬೫೯೦) ಏ. ೭ರಂದು ೧೫ ನಿಮಿಷ ಹಾಗೂ ಏ. ೮ರಂದು ೭೫ ನಿಮಿಷ ನಿಯಂತ್ರಣಗೊಳಿಸಲಾಗುತ್ತದೆ.
ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್(೧೬೫೯೬) ರೈಲು ಏ. ೮ರಂದು ೩೦ ನಿಮಿಷ, ಬೆಳಗಾವಿ-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು(೨೦೬೫೪) ಏ. ೮ರಂದು ೩೦ ನಿಮಿಷ, ಪಂಢರಾಪುರ-ಮೈಸೂರು ಗೋಲಗುಂಬಜ್ ಎಕ್ಸ್ಪ್ರೆಸ್ ರೈಲು(೧೬೫೩೬) ಏ. ೮ರಂದು ೧೫ ನಿಮಿಷ ಹಾಗೂ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಎಕಸ್‌ಪ್ರೆಸ್ ಸ್ಪೆಷಲ್ ರೈಲನ್ನು(೦೭೩೩೯) ಏ. ೮ರಂದು ೬೦ ನಿಮಿಷ ನಿಯಂತ್ರಣ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.