ಕೆಸುವಿನ ಸೊಪ್ಪಿನ ಪತ್ರೊಡೆ
10:35 PM Aug 16, 2022 IST
|
Samyukta Karnataka
ಬೇಕಾದ ಸಾಮಗ್ರಿಗಳು: ಕೆಸುವಿನ ಎಲೆ ೧೦, ಅಕ್ಕಿ ೨ ಪಾವು, ಉದ್ದು ೧/೪ ಪಾವು, ಕೊತ್ತಂಬರಿ ಬೀಜ ೨ ಚಮಚ, ಮೆಂತ್ಯ ೧ ಚಮಚ, ಒಣಮೆಣಸು ೧೦, ಬೆಲ್ಲದ ಅಚ್ಚು ೧/೨, ತೆಂಗಿನಕಾಯಿ ೧, ನಿಂಬೆ ಗಾತ್ರದ ಹುಣಸೆಹಣ್ಣು.
ಮಾಡುವ ವಿಧಾನ:
ಅಕ್ಕಿಯನ್ನು ೨- ೩ ಗಂಟೆಗಳ ಕಾಲ ನೆನೆಸಿಡಿ. ಉದ್ದು, ಮೆಂತ್ಯ, ಕೊತ್ತಂಬರಿ ಬೀಜ, ಒಣಮೆಣಸು ಎಲ್ಲವನ್ನೂ ಹುರಿದು ಹುಣಸೆಹಣ್ಣು, ಅರ್ಧಭಾಗ ಕಾಯಿತುರಿ ಸೇರಿಸಿ ರುಬ್ಬಿಕೊಳ್ಳಿ. ಅಕ್ಕಿಯನ್ನು ತರಿತರಿಯಾಗಿ ರುಬ್ಬಿ ಇದಕ್ಕೆ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ೫-೬ ಗಂಟೆಗಳ ಕಾಲ ಬದಿಗಿಡಿ. ನಂತರ ಸಣ್ಣಗೆ ಕತ್ತರಿಸಿದ ಕೆಸುವಿನ ಎಲೆಗಳನ್ನು ಬೆರೆಸಿ ಇಡ್ಲಿ ತಟ್ಟೆಯಲ್ಲಿ ಬೇಯಿಸಿ. ಬೆಂದ ನಂತರ ಕೆಳಗಿಳಿಸಿ ಸಣ್ಣಗೆ ತುಂಡು ಮಾಡಿದ ಬೆಲ್ಲ, ಉಪ್ಪು, ಅರಿಷಿಣ, ಕಾಯಿತುರಿ ಬೆರೆಸಿ ಒಗ್ಗರಣೆ ಹಾಕಿ ಗೊಟಾಯಿಸಿ.
ಕೆ.ಲೀಲಾ ಶ್ರೀನಿವಾಸ್, ಹರಪನಹಳ್ಳಿ
Next Article