ಕೈಗಾರಿಕರಣ: ಉತ್ತರ ಕರ್ನಾಟಕಕ್ಕೆ ಸಿಂಹಪಾಲು!
03:40 PM Aug 08, 2024 IST | Samyukta Karnataka
ಕೈಗಾರಿಕರಣದ ಮೂಲಕ ಕರ್ನಾಟಕವನ್ನು ಮತ್ತಷ್ಟು ಪ್ರಗತಿಯತ್ತ ಒಯ್ಯುವ ದಿಟ್ಟ ಹೆಜ್ಜೆ!
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕರಣ ಕ್ಷೇತ್ರಕ್ಕೆ ಮತ್ತಷ್ಟು ವೇಗ- ಸುಮಾರು 4,100 ಎಕರೆ ಭೂಮಿ ಹಂಚಿಕೆಯಾಗಿದ್ದು, ವಿಜಯಪುರ ಜಿಲ್ಲೆಗೆ 857.92 ಎಕರೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಸಿಂಹಪಾಲು ಸಿಕ್ಕಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕರ್ನಾಟಕದಾದ್ಯಂತ ಕೈಗಾರಿಕರಣವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ KIADB ಸುಮಾರು 4,108.94 ಎಕರೆ ಜಮೀನು ಹಂಚಿಕೆ ಮಾಡಲಿದೆ. ಈ ಸಂಬಂಧ ಪಾರದರ್ಶಕತೆಯಿಂದ ಕೂಡಿರುವ ಅಧಿಸೂಚನೆಯನ್ನು ಹೊರಡಿಸಲಾಗಿದೆ. #ವಿಜಯಪುರ ಜಿಲ್ಲೆಗೆ ಸುಮಾರು 857.92 ಎಕರೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಬೃಹತ್ ಎನಿಸುವ ಸುಮಾರು 2,045.40 ಎಕರೆ ಭೂಮಿ ಲಭ್ಯವಾಗಲಿದೆ. ಕೈಗಾರಿಕರಣದ ಮೂಲಕ ಕರ್ನಾಟಕವನ್ನು ಮತ್ತಷ್ಟು ಪ್ರಗತಿಯತ್ತ ಒಯ್ಯುವ ದಿಟ್ಟ ಹೆಜ್ಜೆ! ಎಂದಿದ್ದಾರೆ