ಕೊಡುವುದೋ ಬಿಡುವುದೋ ನೀವೇ ಹೇಳಿ..
ನಮಗೆ ಕೊಡೋದನ್ನ ಕೊಟ್ಟುಬಿಡಿ ಎಂದು ಮದ್ರಾಮಣ್ಣ ಹೇಳಿದರೆ, ಸೋದಿ ಮಾಮೋರು ಅಲ್ರಯ್ಯ ಕೊಡೋದಕ್ಕೆ ನೀವೇನು ಕೊಟ್ಟಿದ್ದಿರಿ. ಛಪನ್ನೈವತ್ತಾರು ಕಡೆ ನಾ ಕೊಟ್ಟರೆ ಸರಿ…ಇಲ್ಲದಿದ್ದರೆ ಮರಿ…ಇದನ್ನು ಅರ್ಥ ಮಾಡಿಕೊಳ್ಳಿರಿ..ಓಕೆ ನೀವು ಬಂದು ಇಲ್ಲಿ ಕೂಡೂತ್ತೀರಲ್ಲ ಕುಳಿತುಕೊಳ್ಳಿ ನಿಮಗೆ ಹಾಸಿಕೊಳ್ಳಲು ದೊಡ್ಡ ಜಮಖಾನ ಕಳಿಸುತ್ತೇನೆ. ಯಂಗ್ಟಿಓಟ್ಲಿಂದ ಚಹ ತರಿಸುತ್ತೇನೆ. ಬ್ಯಾಸವರಾದರೆ ಹಾಡು ಹಾಕಿಸುತ್ತೇನೆ. ಈಗ ಬಿಸಿಲಲ್ಲವೇ? ಬೇಕಾದರೆ ತಿರುಗೋ ಫಂಕಾ ಹಾಕಿಸಿಕೊಡುತ್ತೇನೆ… ಕೊನೆಗೆ ನಾನು ನಮ್ಮವರನ್ನು ಕರೆಯಿಸಿ…ಕೊಡುವುದೋ ಬಿಡುವುದೋ ನೀವೇ ಹೇಳಿ ಎಂದು ಕೇಳುತ್ತೇನೆ. ಅವರು ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೇನೆ ಸುಮ್ಮನೇ ನೀವು ಹೈರಾಣಾಗಬೇಡಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿಸಿ..ನೋಡ್ರೋ ಅವರನೇಂತಾರೆ ಎಂದು ಹೇಳಿದ್ದಾರೆ. ಆಡಿನ ಲಚುಮವ್ವ ಲೋಗೋ ಹಿಡಿದುಕೊಂಡು ಮದ್ರಾಮಣ್ಣನ ಮುಂದೆ ನಿಂತು…ಮೈಕ್ ಹಿಡಿದು…ಅಲ್ರೀ ಮದ್ರಾಮಣ್ಣೋರೆ…
ಮದ್ರಾಮಣ್ಣ- ಏಳ್ರಮ್ಮ
ಆ.ಲ.. : ನಾಳೆ ಓಯ್ತೀರಾ?
ಮದ್ರಾಮಣ್ಣ; ಗ್ಯಾರಂಟಿ ಓಯ್ತೀವಿ..
ಆ.ಲ : ಎಷ್ಟು ಜನಾ ಸಾರ್..
ಮದ್ರಾಮಣ್ಣ; ಭಾಳ ಜನ…
ಆ.ಲ ; ಹೇಗೆ ಹೋಗ್ತಾ ಇದೀರಿ…ಪ್ಲೈಟಾ?
ಮದ್ರಾಮಣ್ಣ; ಇಲ್ಲಿಲ್ಲ…ಎಂಗಿದ್ರೂ ಕೆಂಪ್ ಬಸ್ ಫ್ರೀ…ಅದರಾಗೆ…
ಆ.ಲ; ಅಲ್ಲಿ ಹೋಗಿ ಏನ್ಮಾಡ್ತೀರಾ?
ಮದ್ರಾಮಣ್ಣ; ಅಲ್ಲೋಗಿ…ಗಂಟಲು ಹರಿದುಹೋಗುವ ಹಾಗೆ ಒದರತಿವಿ…
ಆ.ಲ; ಹಂಗೆ ಒದರಿದರೆ ಕೊಡೋದು ಕೊಟ್ ಬಿಡ್ತಾರಾ?
ಮದ್ರಾಮಣ್ಣ; ಕೊಡಮಟ ನಾವೆಲ್ಲಿ ಬುಡ್ತೀವಿ
ಆ.ಲ; ಹಾಂ…ಅವರು ಜಮಖಾನಾ ಕೊಡ್ತೀವಿ ಅಂದಿದಾರೆ
ಮದ್ರಾಮಣ್ಣ; ಯಾರೂ?
ಆ.ಲ; ಅದೇ ಸೋದಿ ಮಾಮೋರು ಎಕ್ಸ್ನಲ್ಲಿ ಹಾಕಿದಾರೆ…
ಮದ್ರಾಮಣ್ಣ; ಅಯ್ಯೋ ಹಾಕ್ಲಿಬುಡಮ್ಮ..ಅವರು ಎಕ್ಸ್ನಲ್ಲಿ ಹಾಕಿದರೆ ನಾವು ಝಡ್‌ನಲ್ಲಿ ಹಾಕ್ತೀವಿ…
ಆ.ಲ; ಸರಿ ಸಾರ್ ನಮಸ್ಕಾರ…ಬರ್ತೀವಿ….